Categories: ತುಮಕೂರು

ತುಮಕೂರು: 6ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನ

ತುಮಕೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಮಕೂರು, ಮಧುಗಿರಿ, ತಿಪಟೂರು, ಕುಣಿಗಲ್‌ನ ಮೊರಾರ್ಜಿ ದೇಸಾಯಿ ವಸತಿಶಾಲೆ(ವಸತಿ ಸಹಿತ) ಮತ್ತು ಶಿರಾದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿಶಾಲೆ ಹಾಗೂ ತುಮಕೂರು, ಶಿರಾ, ಮಧುಗಿರಿ, ಪಾವಗಡ, ಗುಬ್ಬಿ, ತುರುವೇಕೆರೆಯ ಮೌಲಾನಾ ಆಜಾದ್ ಮಾದರಿ ಶಾಲೆ(ವಸತಿ ರಹಿತ ಆಂಗ್ಲ ಮಾಧ್ಯಮ)ಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಶೇ.೭೫ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ(ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ಹಾಗೂ ಶೇ.೨೫ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿರಿಸಿದ್ದು, ಅಲ್ಪಸಂಖ್ಯಾತರ ಹಾಗೂ ಇತರೆ ಹಿಂದುಳಿದ ವರ್ಗದ ಕುಟುಂಬದ ವಾರ್ಷಿಕ ಆದಾಯವು 1.00 ಲಕ್ಷ ಮೀರಿರಬಾರದು ಮತ್ತು ಪ್ರವರ್ಗ-1, ಪ.ಜಾ. ಹಾಗೂ ಪರಿಶಿಷ್ಟ ಪಂಗಡದ ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ರೂ. ಮೀರಿರಬಾರದು.

ಆಸಕ್ತ ೫ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮೇ 13, 2023ರೊಳಗಾಗಿ ಆನ್‌ಲೈನ್ ಸೇವಾಸಿಂಧು ಪೋರ್ಟಲ್ ಲಿಂಕ್(https://sevasindhuservices.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಅಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು, ದೂ.ವಾ.ಸಂ. 0816-2273724ನ್ನು ಸಂಪರ್ಕಿಸಬಹುದಾಗಿದೆ.

Ashika S

Recent Posts

ಬಿಜೆಪಿಗೆ ಮತ ಹಾಕ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಕ್ತಿಗೆ ಥಳಿತ

ಕಾಂಗ್ರೆಸ್​ಗೆ ಮತ ಹಾಕಲ್ಲ, ನಾವು ಬಿಜೆಪಿಗೆ ಮತ ಹಾಕುತ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ…

3 mins ago

ಆನ್‌ಲೈನ್ ಮತದಾನ ಮಾಡಿದ್ದೇನೆ ಎಂದ ತಮಿಳಿ ನಟಿ ಜ್ಯೋತಿಕಾ

ತಮಿಳಿನ ನಟಿ ಜ್ಯೋತಿಕಾ ರಾಜ್‌ಕುಮಾರ್ ರಾವ್ ಸಂದರ್ಶನವೊಂದರಲ್ಲಿ ಆನ್‌ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಸೂರ್ಯ…

14 mins ago

ಯುನಿಸೆಫ್ ಇಂಡಿಯಾʼಗೆ ಕರೀನಾ ಕಪೂರ್ ರಾಯಭಾರಿ

ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 2014ರಿಂದ ಯುನಿಸೆಫ್‌ ಜತೆ ನಟು ಹೊಂದಿ, ಅದರ…

24 mins ago

ಶಂಕರ್‌ನಾಗ್ ಹೆಸರಿನಲ್ಲಿ ಮಹತ್ವದ ಘೋಷಣೆ ಮಾಡಲಿದೆ ಕರ್ನಾಟಕ ಸರ್ಕಾರ

ನಟ, ನಿರ್ದೇಶಕ ಶಂಕರ್ ನಾಗ್ ನಮ್ಮನ್ನು ಅಗಲಿ ದಶಕಗಳೇ ಕಳೆದರೂ ಕೂಡ ಅವರ ನೆನಪು ಸದಾ ಕನ್ನಡಿಗರ ಮನದಲ್ಲಿ ಹಸಿರಾಗಿರುತ್ತದೆ.…

28 mins ago

ಪೆಟ್ರೋಲ್‌ ತುಂಬಿದ್ದ ಟ್ಯಾಂಕರ್‌ ಪಲ್ಟಿ: ಭಾರೀ ಪ್ರಮಾಣದ ಪೆಟ್ರೋಲ್ ಸೋರಿಕೆ

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್‌ ತುಂಬಿದ್ದ ಟ್ಯಾಂಕರ್‌ ಪಲ್ಟಿಯಾದ ಘಟನೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಡೆದಿದೆ.

38 mins ago

ರೇವಣ್ಣ ವಿರುದ್ಧದ ಕಿಡ್ನ್ಯಾಪ್​ ಕೇಸ್​: ತೋಟದ ಸಿಬ್ಬಂದಿ ಸ್ಫೋಟಕ ಹೇಳಿಕೆ

ಸಂತ್ರಸ್ತ ಮಹಿಳೆ ಕಿಡ್ನ್ಯಾಪ್​ ಆರೋಪ ಪ್ರಕರಣದಲ್ಲಿ ಹೆಚ್​ಡಿ ರೇವಣ್ಣ ಬಂಧನವಾಗಿದೆ. ಎಸ್​ಐಟಿ ಅಧಿಕಾರಿಗಳು ಮೈಸೂರಿನ ಹುಣಸೂರು ತಾ| ಕಾಳೇನಹಳ್ಳಿಯಲ್ಲಿ ಸಂತ್ರಸ್ತ…

43 mins ago