News Karnataka Kannada
Friday, April 19 2024
Cricket
ತುಮಕೂರು

ಇಂದು ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತ್ಯೋತ್ಸವ

ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ.  ಸಿದ್ದಗಂಗಾ ಮಠದ ಶತಾಯುಷಿ ಶಿವೈಕ್ಯ ಶಿವಕುಮಾರ ಶ್ರೀಗಳ 117ನೇ ಜಯಂತೋತ್ಸವ ಹಾಗೂ ಗುರುವಂದನ ಕಾರ್ಯಕ್ರಮ ಆಚರಣೆಗೆ ಇಂದು ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿವೆ.
Photo Credit : NewsKarnataka

ತುಮಕೂರು: ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ.  ಸಿದ್ದಗಂಗಾ ಮಠದ ಶತಾಯುಷಿ ಶಿವೈಕ್ಯ ಶಿವಕುಮಾರ ಶ್ರೀಗಳ 117ನೇ ಜಯಂತೋತ್ಸವ ಹಾಗೂ ಗುರುವಂದನ ಕಾರ್ಯಕ್ರಮ ಆಚರಣೆಗೆ ಇಂದು ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿವೆ.

ಶ್ರೀಗಳ ಜಯಂತೋತ್ಸವದ ಹಿನ್ನೆಲೆ ಮಠಕ್ಕ ಭಕ್ತ ಸಾಗರವೇ ಹರಿದು ಬರುತ್ತಿದೆ. ಇದು ಶ್ರೀ ಶಿವಕುಮಾರ ಸ್ವಾಮೀಜಿಗಳಿಲ್ಲದೇ ಶ್ರೀಮಠದಲ್ಲಿ ನಡೆಯುತ್ತಿರುವ ಶ್ರೀಗಳ 6ನೇ ಜನ್ಮದಿನವಾಗಿದೆ.

ಶ್ರೀಗಳ ಜಯಂತ್ಯೋತ್ಸವ ಹಿನ್ನೆಲೆ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಈ ಬಾರಿ ವಿಶೇಷವಾಗಿ ಪತಾಂಜಲಿ ಖ್ಯಾತಿಯ ಬಾಬಾ ರಾಮದೇವ್, ಸುತ್ತೂರು ಶ್ರೀಗಳು, ಮುಂಡರಗಿಯ ಅನ್ನದಾನೇಶ್ವರ ಶ್ರೀಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಗದಗಿನ ವೀರಶೈವ ಪುಣ್ಯಾಶ್ರಮದ ಅಧ್ಯಕ್ಷರಾಗಿರುವ ಕಲ್ಲಯ್ಯ ಅಜ್ಜರವರು ಸೇರಿದಂತೆ, ಹಲವು ಪರಮ ಪೂಜ್ಯರು ಜಯಂತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಇಂದು ಬೆಳಗಿನ ಜಾವದಿಂದಲೇ ಶ್ರೀಮಠದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಆರಂಭವಾಗಿವೆ. ಬೆಳ್ಳಿಗೆ 5 ಗಂಟೆಯಿಂದಲೇ ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ನೆರವೇರಿದೆ. ಬಳಿಕ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುತ್ತಳಿ ಮೆರವಣಿಗೆ ನಡೆಯಲಿದೆ. ಇನ್ನು ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಇರೋ ಹಿನ್ನೆಲೆ ರಾಜಕಾರಣಿಗಳಿಗೆ ಜಯಂತ್ಯೋತ್ಸವಕ್ಕೆ ಆಹ್ವಾನ ನೀಡಿಲ್ಲ. ಅಲ್ಲದೇ ಎಸ್ಎಸ್ಎಲ್​ಸಿ ಪರೀಕ್ಷೆ ಇರುವ‌ ಹಿನ್ನೆಲೆ ಆದಷ್ಟು ಸರಳವಾಗಿ ಕಾರ್ಯಕ್ರಮ ಆಚರಣೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು