Categories: ತುಮಕೂರು

ಕೇಬಲ್ ವೈರ್ ಮೈ ಮೇಲೆ ಬಿದ್ದು ನರ್ಸ್ ಸಾವು

ತುಮಕೂರು:  ಕೇಬಲ್ ವೈರ್​ಗೆ ವಿದ್ಯುತ್ ತಂತಿ ತಗುಲಿ ನರ್ಸ್​ವೊಬ್ಬರ ಮೇಲೆ ಬಿದ್ದು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟೆ ಮೂಲದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಲಕ್ಷ್ಮೀ ಬಾಯಿ ಜಾದವ್ (36), ಮೃತ ದುರ್ದೈವಿ.

ಘಟನೆ ಏನು?: ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮೀ ಬಾಯಿ ಜಾದವ್,  ಕೆಲಸ ಮುಗಿಸಿ ಇಪ್ಪಾಡಿಯಿಂದ ಕುಣಿಗಲ್ ಪಟ್ಟಣಕ್ಕೆ ಬೈಕ್​ನಲ್ಲಿ ಬರುವಾಗ ದಾರಿಯಲ್ಲಿ ಹಾದುಹೋಗಿದ್ದ ಕೇಬಲ್ ವೈರ್​ಗೆ ವಿದ್ಯುತ್ ತಂತಿ ತಗುಲಿ ಲಕ್ಷ್ಮೀಬಾಯಿ ಮೇಲೆ‌ ಬಿದ್ದಿದೆ.

ಕೇಬಲ್ ವೈರ್ ಬಿದ್ದ ಪರಿಣಾಮ ಲಕ್ಷ್ಮೀಬಾಯಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಬೈಕ್ ಸವಾರ ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಣ್ಮಣ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ಲಕ್ಷ್ಮೀ ಬಾಯಿ ಅವರ ಮೃತದೇಹವನ್ನ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Ashika S

Recent Posts

ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವು

ಬನಹಟ್ಟಿ ಪಟ್ಟಣದಲ್ಲಿ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

20 mins ago

ಮುಂಗಾರು: ಭೂಮಿ ಹದ ಮಾಡಲು ಮುಂದಾದ ರೈತರು

ಹಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ರೈತರು ಭೂಮಿ ಹದ ಮಾಡುವ ಕೆಲಸಕ್ಕೆ ಮುಂದಡಿ ಇಟ್ಟಿದ್ದಾರೆ.

38 mins ago

ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವು !

ಇಲ್ಲಿನ ಕವರ್ಧಾದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.

50 mins ago

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಬಂಧಿಸಿದ ಎಟಿಎಸ್

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ  ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

1 hour ago

ಮೇಲ್ಛಾವಣಿಗೆ ಬಿದ್ದು ಬದುಕುಳಿದ ಮಗು; ಆದರೆ ಟೀಕೆಯಿಂದ ಬೇಸತ್ತು ತಾಯಿ ಆತ್ಮಹತ್ಯೆ

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಚೆನ್ನೆೈನ ಅಪಾರ್ಟ್ ಮೆಂಟ್​ವೊಂದರ ಮೇಲ್ಛಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಆ ಮಗುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ಮಗುವಿನ…

1 hour ago

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ: ಸಿಎಂ

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ,  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

1 hour ago