News Karnataka Kannada
Thursday, April 25 2024
ತುಮಕೂರು

ರಕ್ತದಾನದಿಂದ ಶಾರೀರಿಕ ಆರೋಗ್ಯ ವೃದ್ಧಿ: ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು

Donating blood improves physical health: Vice-Chancellor Prof. M. Venkateswaralu
Photo Credit : News Kannada

ತುಮಕೂರು: ಶಾರೀರಿಕ ಆರೋಗ್ಯ ವೃದ್ಧಿಯಾಗಬೇಕಾದರೆ ಮೂರ್ನಾಲ್ಕು ತಿಂಗಳಿಗೊಮ್ಮೆಯಾದರೂ ನಾವೆಲ್ಲರೂ ರಕ್ತದಾನ ಮಾಡಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ತುಮಕೂರು ವಿವಿ ಕಲಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಎನ್.ಎಸ್.ಎಸ್., ರೇಂರ‍್ಸ್ & ರೋರ‍್ಸ್ ಘಟಕ ಹಾಗೂ ತುಮಕೂರು ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತಾನಾಡಿದರು.

ವೈಜ್ಞಾನಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯುವಕರು ರಕ್ತದಾನ ಮಾಡಬೇಕು. ಮಾನಸಿಕ ಆರೋಗ್ಯದ ಜೊತೆಗೆ ಶಾರೀರಿಕ ಆರೋಗ್ಯದಲ್ಲಿ ಹೆಚ್ಚು ಪ್ರಗತಿ ಕಾಣಬೇಕೆಂದರೆ ರಕ್ತದಾನ ಅವಶ್ಯಕ. ರಕ್ತದಾನ ಜೀವ ಉಳಿಸುವ ನಿಧಿ ಎಂದರು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ. ವೀಣಾ ಉಮೇಶ್ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ, ಎಚ್‌ಐವಿ, ಕ್ಯಾನ್ಸರ್ ರೋಗಿಗಳಿಗೆ, ಅಪಘಾತಕ್ಕೊಳಗಾದವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡುವುದರಿಂದ ವ್ಯಕ್ತಿಯ ಜೀವ ಉಳಿಸುವುದರ ಜೊತೆಗೆ ದಾನಿಯ ದೇಹದ ಕೊಬ್ಬಿನಾಂಶ ಕಡಿಮೆಯಾಗಿ ಹೃದಯಾಘಾತ ಆಗುವ ಸಂಭವ ಕಡೆಮೆಯಿದೆ ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ರಕ್ತ ನೀಡಿ ಜೀವ ಉಳಿಸಬೇಕು. ನಮ್ಮ ರಕ್ತ ಮತ್ತೊಂದು ಕುಟುಂಬಕ್ಕೆ ಕೊಡುಗೆಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ರಕ್ತದಾನ ವ್ಯಾಪಾರವಾಗಬಾರದು. ಸಾಧ್ಯವಾದಷ್ಟು ಎಲ್ಲರೂ ಜಿಲ್ಲಾಸ್ಪತ್ರೆಗಳಲ್ಲಿ ರಕ್ತದಾನ ಮಾಡಿದರೆ ಅವಶ್ಯಕತೆ ಇರುವವರಿಗೆ ಉಚಿತವಾಗಿ ರಕ್ತ ಸಿಗಲಿದೆ. ನಮ್ಮ ಧ್ಯೇಯ ಶಿಕ್ಷಣದ ಜೊತೆ ವಿದ್ಯಾರ್ಥಿಗಳ ಆರೋಗ್ಯವೂ ಹೌದು ಎಂದು ಹೇಳಿದರು.

ರಕ್ತದಾನ ಶಿಬಿರದಲ್ಲಿ ಒಟ್ಟಾರೆಯಾಗಿ ೧೦೦ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು. ಕಾರ್ಯಕ್ರಮದಲ್ಲಿ ವಿವಿ ಕಲಾ ಕಾಲೇಜಿನ ಎನ್.ಎಸ್.ಎಸ್. ಘಟಕದ ಸಂಯೋಜಕಿ ಡಾ. ಸಲ್ಮಾ ಬಾನು, ರೋವರ್ಸ್ & ರೇಂಜರ್ಸ್ ಘಟಕದ ಸಂಯೋಜಕರಾದ ಡಾ. ಚಂದ್ರಮೌಳಿ, ಡಾ. ವನಜಾಕ್ಷಿ ವಿ., ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ. ಶೇಖ್ ಭಾಗವಹಿಸಿದ್ದರು. ವಿವಿ ಕಲಾ ಕಾಲೇಜಿನ ಎನ್.ಎಸ್.ಎಸ್. ಘಟಕದ ಸಂಯೋಜಕಿ ಡಾ. ಪದ್ಮಿನಿ ಎಸ್. ವಿ. ಸ್ವಾಗತಿಸಿ, ನಿರೂಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಹರ್ಷಿತ ಕೆ. ಎಸ್. ವಂದಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು