News Karnataka Kannada
Saturday, April 13 2024
Cricket
ತುಮಕೂರು

ಸಿಬ್ಬಂದಿಯ ಕೊರತೆಯ ನಡುವೆಯೂ ತಾಲೂಕಿನಲ್ಲಿ 34,817 ಜಾನುವಾರುಗಳಿಗೆ ಚರ್ಮಗಂಟು ಲಸಿಕೆ

Despite shortage of staff, 34,817 cattle vaccinated in the taluk
Photo Credit : News Kannada

ತುಮಕೂರು: ಚರ್ಮಗಂಟು ರೋಗ ಬಾಧೆಯಿಂದ ದನಕರುಗಳನ್ನು ರಕ್ಷಿಸಲು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಜೂನ್ 12 ರಿಂದ ಲಸಿಕಾ ಕಾರ್ಯಕ್ರಮ ಆರಂಭಗೊಂಡಿದೆ. ತಾಲೂಕಿನಲ್ಲಿ ಪಶು ವೈದ್ಯರು ಸೇರಿದಂತೆ ಸಿಬ್ಬಂದಿಯ ಕೊರತೆಯ ನಡುವೆಯೂ ಜೂ.30 ರ ವರೆವಿಗೆ 34,817 ದನಗಳಿಗೆ ಲಸಿಕೆ ಹಾಕಲಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಒಟ್ಟು 48,577 ದನಗಳಿದ್ದು ಇಲಾಖೆ ನಿಗಧಿ ಪಡಿಸಿದ್ದ ಜೂನ್ 30 ರ ಅಂತಿಮ ದಿನಾಂಕದೊಳಗೆ ಶೇ.100 ಗುರಿ ಸಾಧನೆಗೆ ಸಿಬ್ಬಂದಿ ಮುಂದಾಗಿದ್ದರೂ ಸಹ ರೈತರ ಅಸಹಕಾರದಿಂದ 34,817 ದನಗಳಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಈಗ ಕೊನೆ ದಿನಾಂಕ ಜು.5 ರ ವರೆವಿಗೆ ಮುಂದೂಡಿರುವುದರಿಂದ ಗುರಿ ತಲುಪಲು ಕಾಲವಕಾಶ ಲಭಿಸಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ೧೩,೧೮೩ ಡೋಸ್ ಲಸಿಕೆ ದಾಸ್ತಾನು ಇದ್ದು, ಜೂನ್ ಅಂತ್ಯದೊಳಗೆ ಶೇ 100 ಗುರಿ ಸಾಧಿಸಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಪಶುಪಾಲಕರು ಸ್ಪಂದಿಸಿ ಲಸಿಕೆ ಹಾಕಿಸಲು ಮುಂದೆ ಬರಬೇಕಿದೆ.

ಕಳೆದ ವರ್ಷ ತಾಲೂಕಿನಲ್ಲಿ ಚರ್ಮಗಂಟು ರೋಗಕ್ಕೆ ನೂರಾರು ಜಾನುವಾರುಗಳು ತುತ್ತಾಗಿ, ಬರೋಬ್ಬರಿ 58 ಜಾನುವಾರುಗಳು ಮೃತಪಟ್ಟಿದ್ದವು. ಇವುಗಳಲ್ಲಿ 48 ಜಾನುವಾರುಗಳಿಗೆ ಪರಿಹಾರ ನೀಡಲಾಗಿದೆ. ರೋಗ ನಿಯಂತ್ರಿಸಲು ಕಳೆದ ವರ್ಷ 47,700 ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. ಈ ಬಾರಿ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ರೋಗ ಬರುವ ಮೊದಲೇ ಲಸಿಕೆಯನ್ನು ಹಾಕಿ, ಜಾನುವಾರುಗಳನ್ನು ರಕ್ಷಿಸಲು ಕ್ರಮ ಕೈಗೊಂಡಿದೆ. ಲಸಿಕೆ ಹಾಕುವ ಕಾರ್ಯ ತಾಲೂಕಿನಲ್ಲಿ ಭರದಿಂದ ನಡೆಯುತ್ತಿದೆ.

ಲಸಿಕೆ ಹಾಕಿಸಿದರೆ ದನಗಳಿಗೆ ಜ್ವರ, ನೋವು, ಊತ ಕಾಣಿಸಿಕೊಳ್ಳಬಹುದು ಹಾಗೂ ಹಸುಗಳಲ್ಲಿ ಹಾಲು ಕಡಿಮೆಯಾಗಬಹುದು ಎಂಬ ಆತಂಕದಿಂದ ಕೆಲವು ರೈತರು ಲಸಿಕೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಲಸಿಕೆ ಹಾಕಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ ಮತ್ತು ಚರ್ಮಗಂಟು ರೋಗದಿಂದ ದನಗಳು ಪಾರಾಗುತ್ತವೆ ಎಂದು ಪಶುವೈದ್ಯರು ಎಷ್ಟೇ ಹೇಳಿದರೂ ರೈತರು ಲಸಿಕೆ ಹಾಕಿಸಲು ಮುಂದೆ ಬಾರದಿರುವುದು ಶೇ. 100 ಗುರಿ ತಲುಪಲು ಹಿನ್ನೆಡೆಯಾಗುತ್ತಿದೆ ಎನ್ನುತ್ತಾರೆ ಪಶು ಇಲಾಖೆಯ ಸಸಹಾಯಕ ನಿರ್ದೇಶಕ ಡಾ.ರೆ.ಮ.ನಾಗಭೂಷಣ್.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಾದ್ಯಂತ ಎಮ್ಮೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಗಟ್ಟಲು ಲಸಿಕೆ ಹಾಕಲಾಗುತ್ತಿದೆ. ತಾಲೂಕಿನಲ್ಲಿ ೪೮,೫೭೭ ದನಗಳಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಂಡಿದ್ದು ಜುಲೈ ೫ ರವರೆಗೆ ಲಸಿಕೆ ಹಾಕಿಸಲು ಕಾಲಾವಕಾಶವಿದೆ.

ಜಿಲ್ಲಾ ಕೇಂದ್ರದಿಂದ ೪೮ ಸಾವಿರ ಡೋಸ್‌ಗಳು ತಾಲ್ಲೂಕಿಗೆ ಪೂರೈಕೆಯಾಗಿವೆ. ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಪಶು ವೈದ್ಯರು ಲಸಿಕೆ ಹಾಕುತ್ತಿದ್ದಾರೆ. ಉಚಿತವಾಗಿ ಹಾಕುವ ಈ ಅಭಿಯಾನದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ರೈತರು ವದಂತಿಗಳಿಗೆ ಕಿವಿಗೊಡದೆ ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು