News Karnataka Kannada
Saturday, April 27 2024
ತುಮಕೂರು

ಶ್ರೀಗಂಧದ ಮರ ಕಳವು: ಅಧಿಕಾರಿಗಳ ಗುಂಡೇಟಿಗೆ ಒಬ್ಬ ಸಾವು

Firing 23082021
Photo Credit :

ತುಮಕೂರು: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಹಾರಿಸಿದ ಗುಂಡಿಗೆ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಕೆಂಕೆರೆ ಮೀಸಲು ಅರಣ್ಯದಲ್ಲಿ ಈ ಘಟನೆ ಭಾನುವಾರ ನಡೆದಿದೆ. ಗುಂಡೇಟಿಗೆ ಬಲಿಯಾದವನ ಗುರುತು ಇನ್ನೂ ಪತ್ತೆಯಾಗಿಲ್ಲ. ವ್ಯಕ್ತಿಯ ವಯಸ್ಸು 30-35 ಆಸುಪಾಸಿನದ್ದಾಗಿದ್ದು, ಕೈಮೇಲೆ ಕನ್ನಡದಲ್ಲಿ ಈಶ್ವರ ಎಂಬ ಅಚ್ಚೆ ಇರುವುದು ಕಂಡು ಬಂದಿದೆ. ಗುಂಡೇಟಿಗೆ ಬಲಿಯಾದವನು ಸೇರಿದಂತೆ ನಾಲ್ವರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದರು ಎನ್ನಲಾಗಿದೆ. ಇದೀಗ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು