News Karnataka Kannada
Thursday, April 18 2024
Cricket
ತುಮಕೂರು

ನವವಿವಾಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ: ವರ ಸಾವು

Four killed in accident between truck and car
Photo Credit :

ತುರುವೇಕೆರೆ : ಮದ್ವೆಯಾದ 11 ದಿನಕ್ಕೆ ವರ ದುರಂತ ಅಂತ್ಯ ಕಂಡಿದ್ದು, ವಧುವಿನ ಸ್ಥಿತಿ ಚಿಂತಾಜನಕವಾಗಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಗೋಳಾಟ ನೋಡಿದ್ರೆ ಕರುಳು ಹಿಂಡುತ್ತೆ.

ಅರಸೀಕೆರೆ ತಾಲೂಕು ಕಾಮ್ಲಾಪುರದ ನಂಜುಂಡಯ್ಯ ಅವರ ಪುತ್ರ ಪ್ರಸನ್ನಗೂ ಮತ್ತು ಮಂದಾರಗೂ 10 ದಿನದ ಹಿಂದೆ ಮದುವೆ ಆಗಿತ್ತು.

ಪ್ರಸನ್ನ ಮತ್ತು ಮಂದಾರ ಕಾಮ್ಲಾಪುರದಿಂದ ಮನೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಹಾಲಿ ವಾಸವಾಗಿರುವ ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿಗೆ ಕಾರಿನಲ್ಲಿ ಗುರುವಾರ ತೆರಳುತ್ತಿದ್ದರು. ಲಾರಿ ರೂಪದಲ್ಲಿ ಬಂದ ಜವರಾಯ, ನವವಿವಾಹಿತರ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ.

ತುಮಕೂರು ಜಿಲ್ಲೆ ತುರುವೇಕರೆ ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಶೆಟ್ಟಿಕೆರೆ ಬಳಿ ನವವಿವಾಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ನವವಿವಾಹಿತ ಪ್ರಸನ್ನ(27) ಮತ್ತು ಕಾರು ಚಾಲಕ ಬೆಂಗಳೂರಿನ ಕೈಗೊಂಡನಹಳ್ಳಿಯ ಚನ್ನಯ್ಯ(32) ಸ್ಥಳದಲ್ಲೇ ಮೃತಪಟ್ಟರೆ, ಸಂತೋಷ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರಸನ್ನನ ಪತ್ನಿ ಮಂದಾರ ತೀವ್ರ ಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಜಖಂಗೊಂಡಿದ್ದು, ಲಾರಿಯ ಒಂದು ಭಾಗ ನಜ್ಜುಗುಜ್ಜಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ತುರುವೇಕರೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು