ಬೆಂಗಳೂರು: ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತರ ಮಧ್ಯ ರೈಲ್ವೆಯು ಪ್ರಯಾಗರಾಜ್ – ಎಸ್ಎಂವಿಟಿ ಬೆಂಗಳೂರು – ಪ್ರಯಾಗರಾಜ್ ನಡುವೆ ವಿಶೇಷ ರೈಲನ್ನು 7 ಟ್ರಿಪ್ ಓಡಿಸಲು ತೀರ್ಮಾನಿಸಿದೆ.
ಎಸ್.ಎಂ.ವಿ.ಟಿ ಬೆಂಗಳೂರು – ಪ್ರಯಾಗರಾಜ್ – ಎಸ್.ಎಂ.ವಿ.ಟಿ. ಬೆಂಗಳೂರು ವಿಶೇಷ ಸಾಪ್ತಾಹಿಕ ರೈಲು ಸೇವೆ
ರೈಲು ಸಂಖ್ಯೆ 04131 ಪ್ರಯಾಗ್‌ರಾಜ್ – ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು 06.10.2024 ರಿಂದ 17.11.2024 ರವರೆಗೆ ಪ್ರತಿ ಭಾನುವಾರ ರಾತ್ರಿ 11.30 ಗಂಟೆಗೆ ಪ್ರಯಾಗ್ ರಾಜ್‌ನಿಂದ ಹೊರಟು ಮಂಗಳವಾರ ಸಂಜೆ 6.30 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರನ್ನು ತಲುಪಲಿದೆ.
ರೈಲು ಸಂಖ್ಯೆ 04132 ಎಸ್.ಎಂ.ವಿ.ಟಿ. ಬೆಂಗಳೂರು – ಪ್ರಯಾಗ್ ರಾಜ್ ವಿಶೇಷ ರೈಲು 09.10.2024 ರಿಂದ 20.11.2024ರ ವರೆಗೆ ಪ್ರತಿ ಬುಧವಾರ ಬೆಳಿಗ್ಗೆ 07.10 ಕ್ಕೆ ಎಸ್.ಎಂ.ವಿ.ಟಿ. ಬೆಂಗಳೂರಿನಿಂದ ಹೊರಟು ಗುರುವಾರ ರಾತ್ರಿ 10.50 ಕ್ಕೆ ಪ್ರಯಾಗ್ರಾಜ್ ತಲುಪಲಿದೆ.
ಈ ವಿಶೇಷ ರೈಲುಗಳಿಗೆ ಈ ಕೆಳಕಂಡ ನಿಲ್ದಾಣಗಳಲ್ಲಿ ನಿಲುಗಡೆ
ಕೃಷ್ಣರಾಜಪುರಂ, ಜೋಲಾರ್‌ಪೇಟ್ಟೈ, ಕಾಟ್ಪಾಡಿ, ಪೆರಂಬೂರ್, ನೆಲ್ಲೂರು , ಓಂಗೋಲ್, ಚೀರಾಲ, ವಿಜಯವಾಡ, ಖಮ್ಮಂ, ವಾರಂಗಲ್, ಮಂಚಿರ್ಯಾಲ, ಬೆಳ್ಳಂಪಲ್ಲಿ, ಸಿರ್‌ಪುರ ಕಾಘಜ್‌ನಗರ, ಬಲ್ಲಾರ್ಷಾ, ನಾಗ್ಪುರ, ಇಟಾರ್ಸಿ, ಜಬಲ್‌ಪುರ, ಕಟ್ನಿ, ಸತ್ನಾ ಮತ್ತು ಮಾಣಿಕ್ಪುರ್.
ರೈಲು ಸಂಖ್ಯೆ 06101 / 06102 ಎರ್ನಾಕುಲಂ – ಯಲಹಂಕ – ಎರ್ನಾಕುಲಂ ಗರೀಬ್ ರಥ್ ವಿಶೇಷ ರೈಲು ಸೇವೆಯನ್ನು ಎರ್ನಾಕುಲಂನಿಂದ 08.09.2024 ರಿಂದ 18.09.2024 ರವರೆಗೆ (ಹೆಚ್ಚುವರಿ 05 ಟ್ರಿಪ್‌ಗಳು) ಮತ್ತು ಯಲಹಂಕದಿಂದ 09.09.2024 ರಿಂದ 19.09.2024 ರವರೆಗೆ (ಹೆಚ್ಚುವರಿ 05 ಟ್ರಿಪ್‌ಗಳು) ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.