Bengaluru 28°C
Ad

ಶಕ್ತಿ ಯೋಜನೆ ಆರಂಭವಾಗಿ ನಾಳೆಗೆ 1 ವರ್ಷ: 225 ಕೋಟಿ ಮಹಿಳೆಯರ ಉಚಿತ ಪ್ರಯಾಣ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಆರಂಭವಾಗಿ ನಾಳೆಗೆ (ಬುಧವಾರ) ಒಂದು ವರ್ಷ ಆಗಲಿದೆ. ಈ ಅವಧಿಯಲ್ಲಿ 225 ಕೋಟಿ ಮಹಿಳೆಯರು ಉಚಿತವಾಗಿ ನಾಲ್ಕು ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ.

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಆರಂಭವಾಗಿ ನಾಳೆಗೆ (ಬುಧವಾರ) ಒಂದು ವರ್ಷ ಆಗಲಿದೆ. ಈ ಅವಧಿಯಲ್ಲಿ 225 ಕೋಟಿ ಮಹಿಳೆಯರು ಉಚಿತವಾಗಿ ನಾಲ್ಕು ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ.

ನಾಲ್ಕು ನಿಗಮಕ್ಕೆ ಬರೋಬ್ಬರಿ 5481 ಕೋಟಿ ರೂಪಾಯಿ ಆದಾಯ ಬಂದಿದೆ. ಕೆಎಸ್ಆರ್​ಟಿಸಿ ಒಂದರಲ್ಲೇ 68 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದರೆ, ಬಿಎಂಟಿಸಿಯಲ್ಲಿ 71 ಕೋಟಿ, ಕೆಕೆಆರ್​ಟಿಸಿ- ಎನ್​ಡಬ್ಲ್ಯುಕೆಆರ್​ಟಿಸಿಯಲ್ಲಿ 85 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

ನಾಲ್ಕು ನಿಗಮಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಆರ್ಥಿಕವಾಗಿ ನಷ್ಟದಲ್ಲಿದ್ದ ನಿಗಮಕ್ಕೆ ಶಕ್ತಿ ಯೋಜನೆಯಿಂದ ದೊಡ್ಡ ಮಟ್ಟದಲ್ಲಿ ಲಾಭವಾಗಿದೆ.

ಕೆಎಸ್ಆರ್​​​ಟಿಸಿಗೆ 2070 ಕೋಟಿ ರೂಪಾಯಿ ಆದಾಯ ಬಂದಿದ್ದರೆ, ಬಿಎಂಟಿಸಿಗೆ 937 ಕೋಟಿ ರೂಪಾಯಿ, ಕೆಕೆಆರ್​ಟಿಸಿ- ಎನ್​ಡಬ್ಲ್ಯುಕೆಆರ್​ಟಿಸಿಗೆ ಸೇರಿ ಒಟ್ಟು 2472 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಯೋಜನೆಯ ಪರಿಣಾಮವಾಗಿ 2023-24ನೇ ಸಾಲಿನಲ್ಲಿ 3,930 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿತ್ತು.

Ad
Ad
Nk Channel Final 21 09 2023
Ad