Bengaluru 22°C
Ad

ಇದು ನಿಮ್ಮ ವಾಹಿನಿ ಕಲಾ ವೇದಿಕೆ 13ನೇ ಸಾಂಸ್ಕೃತಿಕ ಸಿಂಚನ ಹಾಗೂ ಕನ್ನಡ ರಾಜ್ಯೋತ್ಸವ

ಕನ್ನಡ ಪರ ಹೋರಾಟಗಾರರು ಕನ್ನಡ ಪರ ಧ್ವನಿ ಎತ್ತುತ್ತಲೇ ಇರಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

ಬೆಂಗಳೂರು: ಕನ್ನಡ ಪರ ಹೋರಾಟಗಾರರು ಕನ್ನಡ ಪರ ಧ್ವನಿ ಎತ್ತುತ್ತಲೇ ಇರಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು. ಇದು ನಿಮ್ಮ ವಾಹಿನಿ ಕಲಾ ವೇದಿಕೆ, ಬೆಂಗಳೂರು ಅರ್ಪಿಸುವ 13ನೇ ಸಾಂಸ್ಕೃತಿಕ ಸಿಂಚನ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Ad

2

ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಇದು ನಿಮ್ಮ ವಾಹಿನಿ ಕಲಾ ವೇದಿಕೆಯವರು ತುಂಬಾ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ, ಈ ಬಾರಿ ಅವರು ನೂರಕ್ಕೂ ಹೆಚ್ಚು ಕನ್ನಡಪರ ಹೋರಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದುದಲ್ಲದೆ ಕನ್ನಡ ಹೋರಾಟಗಾರರಿಗೆ ಸ್ಫೂರ್ತಿಯ ಮಾತುಗಳನ್ನು ಅವರು ಆಡಿದ್ದಾರೆ.

Ad

3

ಇದು ನಿಮ್ಮ ವಾಹಿನಿ ಕಲಾ ವೇದಿಕೆ, ಬೆಂಗಳೂರು ಅರ್ಪಿಸುವ ೧೩ನೇ ಸಾಂಸ್ಕೃತಿಕ ಸಿಂಚನ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮ ಇತ್ತೀಚೆಗೆ ನಯನ ರಂಗಮಂದಿರದಲ್ಲಿ ನಡೆಯಿತು. ಗೌರವಾನ್ವಿತ ನ್ಯಾಯಮೂರ್ತಿಗಳು, ಉಪ ಲೋಕಾಯುಕ್ತರು ಬಿ. ವೀರಪ್ಪ ಅವರು ಕಾರ್ಯಕ್ರಮ ಉದ್ಗಾಟಿಸಿದರು. ಲೇಪಾಕ್ಷಿ ನಿರ್ದೇಶಕರು ಆಂಧ್ರ ಪ್ರದೇಶದ ರಾಜ್ಯಸಭಾ ಸದಸ್ಯರಾದ ಡಾ. ಮಹೇಂದ್ರನಾಥ್ ಬಿ. ಎನ್. ಅವರು ಅಧ್ಯಕ್ಷತೆ ವಹಿಸಿದ್ದರು. ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಎಂ. ಬಸವರಾಜ್ ಪಡುಕೋಟೆಯವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

Ad

4

ಕಾರ್ಯಕ್ರಮ ಅಧ್ಯಕ್ಷರಾಗಿದ್ದ ಡಾ. ಮಹೇಂದ್ರನಾಥ್ ಬಿ. ಎನ್. ಮಾತನಾಡಿ ನಾನು ಆಂಧ್ರ ಪ್ರದೇಶದ ರಾಜ್ಯಸಭಾ ಸದಸ್ಯನಾದರೂ ಕನ್ನಡ ರಾಜ್ಯೋತ್ಸವವನ್ನು ನಾನು ಆಂಧ್ರದಲ್ಲಿ ಆಚರಿಸಿದೆ. ಆಂಧ್ರದಲ್ಲಿ ಹೀಗೆ ಕನ್ನಡದ ಬಾವುಟ ಹಾರಿಸಿದ ಮೊಟ್ಟ ಮೊದಲ ವ್ಯಕ್ತಿ ನಾನು ಎಂದು ಹೆಮ್ಮೆಯಿಂದ ಹೇಳಿದರು.

Ad

5

ಮುಖ್ಯ ಅತಿಥಿಗಳಾದ ಎಂ. ಬಸವರಾಜ್ ಪಡುಕೋಟೆಯವರು ಮಾತನಾಡಿ ನಮ್ಮ ಕರ್ನಾಟಕ ಸೇನೆ ಎಂದೂ ಕನ್ನಡ ಪರ ಹೋರಾಟಗಳಿಗೆ, ಕನ್ನಡಕ್ಕಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಇನ್ನೂರಕ್ಕೆ ಹೆಚ್ಚು ಸಾಧಕರಿಗೆ, ಎಂಬತ್ತಕ್ಕೂ ಹೆಚ್ಚು ಸೈನಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Ad

6

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳು, ಜಾನಪದ, ಸಾಂಕೃಕಿತ ನೃತ್ಯ, ಸಂಗೀತ ಕಾರ್ಯಕ್ರಮವು ಮಧ್ಯಾಹ್ನ ೨:೩೦ರಿಂದ ಸಂಜೆ ೬:೩೦ರವರೆಗೆ ನಿರಂತರವಾಗಿ ನಡೆಯಿತು. ಇಪ್ಪತ್ತಕ್ಕೆ ಹೆಚ್ಚು ಡ್ಯಾನ್ಸ್ ಅಕಾಡೆಮಿಗಳು, ೧೮೦ಕ್ಕೂ ಹೆಚ್ಚು ಮಕ್ಕಳು ಈ ವೇದಿಕೆಯನ್ನು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ಕಾರ್ಯಕ್ರಮ ಸಹಭಾಗಿತ್ವ ವಹಿಸಿದ್ದ ಚಂದ್ರಿಕಾ ಬಿ. ವಿ. , ಇದು ನಿಮ್ಮ ವಾಹಿನಿಇ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ಎಸ್. ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

Ad

7

Ad
Ad
Nk Channel Final 21 09 2023