ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ವಕ್ಫ್ ಆಸ್ತಿ ವಿವಾದವು ಸದ್ಯ ರಾಜಕೀಯ ನಾಯಕರ ದಂಗಲ್ಗೆ ಕಾರಣವಾಗಿದೆ. ರೈತರ ಕೃಷಿ ಜಮೀನುಗಳ ಪಹಣಿಯಲ್ಲಿ ಇತ್ತೀಚೆಗೆ ವಕ್ಫ್ ಆಸ್ತಿ ಎಂಬ ಉಲ್ಲೇಖದ ವರದಿಯು ಕಿಡಿಹೊತ್ತಿಸಿದೆ.
Ad
ವಿಜಯಪುರ, ಬೀದರ್, ಕಲಬುರಗಿ, ಹಾವೇರಿ, ಬಳ್ಳಾರಿ, ರಾಯಚೂರು, ಧಾರವಾಡ, ಚಿಕ್ಕೋಡಿ, ಬಾಲಕೋಟೆ, ಉತ್ತರ ಕನ್ನಡ, ಯಾದಗಿರಿ, ಬೆಂಗಳೂರು ನಗರ, ಗದಗ, ಬೆಳಗಾವಿ, ತುಮಕೂರು, ಕೋಲಾರ, ಮೈಸೂರು ಹೀಗೆ ವಿವಿಧ ಜಿಲ್ಲೆಗಳಲ್ಲಿ ಬರೋಬ್ಬರಿ ರಾಜ್ಯಾದ್ಯಂತ 47,362 ವಕ್ಫ್ ಆಸ್ತಿಗಳಿವೆ ಎಂದು ಎಂಬ ಹೇಳಲಾಗುತ್ತಿದೆ.
Ad
ಇನ್ನು ಕಳೆದ 4 ವರ್ಷದಲ್ಲಿ ರಾಜ್ಯಾದ್ಯಂತ 1,127 ವಕ್ಫ್ ಆಸ್ತಿ ಒತ್ತುವರಿ ಆಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ ಭಾಗದಲ್ಲೇ ಹೆಚ್ಚು ವಕ್ಫ್ ಆಸ್ತಿಗಳಿವೆ ಎಂದು ವರದಿಯಾಗಿದೆ.
Ad
Ad