ಬೆಂಗಳೂರು: ಕಿಡಿಗೇಡಿಯೋರ್ವ ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ ಮೆರೆದಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ನಡೆದಿದೆ. ಪ್ರಾರಂಭದಲ್ಲಿ ಜಗಳಕ್ಕಿಳಿದ ಯುವಕ ಕಾರಿನ ವೈಪರ್ ತುಂಡರಿಸಿದ್ದಾನೆ. ಬಳಿಕ ಗ್ಲಾಸ್ಗೆ ಒಡೆದಿದ್ದಾನೆ.
ಯುವಕ ವೈಪರ್ನಿಂದ ಕಾರಿನ ಗ್ಲಾಸ್ ಮೇಲೆ ಹೊಡೆಯುತ್ತಿದ್ದಂತೆ ಗ್ಲಾಸ್ ಒಡೆದಿದೆ. ಬಳಿಕ ಕಲ್ಲು ಎತ್ತಿ ಹಾಕಿದ್ದಾನೆ. ಈ ವೇಳೆ ದಾರಿ ಹೋಕರು ತಡೆದರೂ ಸಹ ಯುವಕ ದುರ್ವರ್ತನೆ ಜೋರಾಗಿದೆ.
ಇತ್ತ ಕಾರಿನಲ್ಲಿದ್ದವರು ವಿಡಿಯೋ ಮಾಡುತ್ತಿದ್ದಂತೆ ಯುವಕ ವರ್ತನೆ ಜೋರಾಗಿದೆ. ಕಾರಿನಲ್ಲಿದ್ದ ಮಹಿಳೆ ಇದನ್ನು ಕಂಡು ಜೋರಾಗಿ ಕಿರುಚಾಡಿದ್ದಾಳೆ. ಕಾರಿನಲ್ಲಿ ಮಗು ಇದ್ದರೂ ಸಹ ಕಿಡಿಗೇಡಿ ನಡುರಸ್ತೆಯಲ್ಲಿ ಅಟ್ಟಹಾಸ ಮೆರೆದಿದ್ದಾನೆ.
ಘಟನೆ ನಡೆದ ಬೆನ್ನಲ್ಲೇ ಎಕ್ಸ್ ನಲ್ಲಿ ವಿಡಿಯೋ ವೈರಲ್ ಆಗಿದೆ. ಬೆಂಗಳೂರು ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಲಾಗಿದೆ. ಸದ್ಯ ಈ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
https://x.com/HAchrappady/status/1825717196409933931?