ಬೆಂಗಳೂರು: ಮುಡಾ ಹಗರಣ ನಡೆದೇ ಇಲ್ಲ, ಸಿಎಂರನ್ನು ಸಿಲುಕಿಸಲು ಹೀಗೆ ಮಾಡಲಾಗಿದೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
Ad
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ನಡೆದೇ ಇಲ್ಲ. ಸಿಎಂ ಅವರನ್ನು ಸಿಲುಕಿಸಲು ಮುಡಾ ಹಗರಣವನ್ನು ಸೃಷ್ಟಿಸಲಾಗಿದೆ. ಮುಡಾ ಕೇಸ್‌ನಲ್ಲಿ ಸಿಎಂ ಹಾಗೂ ಅವರ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
Ad
ಮುಡಾ ಕೇಸ್ ರಾಜಕೀಯ ದುರುದ್ದೇಶದಿಂದ ಕೂಡಿದೆ. ಹಿಂದೆ ನಾಯ್ಡು, ಕೇಜ್ರಿವಾಲ್‌ಗೂ ಹೀಗೆ ಮಾಡಿದ್ದರು. ಮುಡಾದಲ್ಲಿ ಕಾನೂನು ಬಾಹಿರ ಏನೂ ಆಗಿಲ್ಲ. ಸತ್ಯ ನಮ್ಮ ಪರ ಇದ್ದು ನಮಗೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Ad
Ad