Bengaluru 23°C

ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಎಳೆದಾಡಿ ಹಲ್ಲೆ ನಡೆಸಿದ ಕಿಡಿಗೇಡಿಗಳು

ತಲಘಟ್ಟಪುರ ಠಾಣಾ ವ್ಯಾಪ್ತಿಯ ಆವಲಹಳ್ಳಿಯಲ್ಲಿ ನಡು ರಸ್ತೆಯಲ್ಲಿ ಪಾನಮತ್ತ ಕಿಡಿಗೇಡಿಗಳು ಮಹಿಳೆ, ಯುವತಿ ಮೇಲೆ ಹಲ್ಲೆ  ನಡೆಸಿದ ಘಟನೆ ನಡೆದಿದೆ.

ಬೆಂಗಳೂರು: ತಲಘಟ್ಟಪುರ ಠಾಣಾ ವ್ಯಾಪ್ತಿಯ ಆವಲಹಳ್ಳಿಯಲ್ಲಿ ನಡು ರಸ್ತೆಯಲ್ಲಿ ಪಾನಮತ್ತ ಕಿಡಿಗೇಡಿಗಳು ಮಹಿಳೆ, ಯುವತಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.


ಮದ್ಯ ಸೇವಿಸಿ ಟೈಟ್ ಆಗಿದ್ದ ಬಾಲಾಜಿ, ಯೋಗಿ ಸೇರಿದಂತೆ ಮೂವರು ಪುಂಡರ ಗ್ಯಾಂಗ್ ನಡು ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮತ್ತು ಯುವತಿಯನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ.


ನಿನ್ನೆ ಸಂಜೆ 6 ಗಂಟೆ ವೇಳೆಗೆ ಮಹಿಳೆ ಮತ್ತು ಯುವತಿ ತನ್ನ ಮನೆಯ ರಸ್ತೆ ಬದಿ ಮಗ ಮಕ್ಕಳೊಂದಿಗೆ ವಾಲಿ ಬಾಲ್ ಆಟವಾಡ್ತಿದ್ದರು. ಈ ವೇಳೆ ಬಂದ ಕಿಡಿಗೇಡಿಗಳು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ಮಹಿಳೆ ನಿಂದಿಸಿದನ್ನು ಪ್ರಶ್ನಿಸಿದ್ದಕ್ಕೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.


ಮಹಿಳೆ ಮತ್ತು 21 ವರ್ಷದ ಯುವತಿಯ ಕೂದಲು ಹಿಡಿದೆಳೆದು ಹಲ್ಲೆ ನಡೆಸಿರುವ ದೃಶ್ಯಗಳನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ನೆರೆಹೊರೆಯವರ ಸಹಾಯದಿಂದ ಮಹಿಳೆ, ಯುವತಿ ಪಾರಾಗಿದ್ದಾರೆ.


ಆರೋಪಿಗಳ ವಿರುದ್ದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 34, 504, 323,354 ಅಡಿ ಎಫ್ಐಆರ್ ದಾಖಲಾಗಿದೆ.


ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸ್ತಿದ್ದಾರೆ.


Nk Channel Final 21 09 2023