Bengaluru 26°C
Ad

ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್​

ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎ2  ದರ್ಶನ್‌ ಬೇಲ್‌ ಕೋರಿ ಕೋರ್ಟ್‌ಗೆ ಅರ್ಜಿ  ವಿಚಾರಣೆ ಮತ್ತೆ ಮುಂದೂಡುಲಾಗಿದೆ. ಇಂದು ನ್ಯಾಯಾಲಯ ವಿಚಾರಣೆಗೆ ಕರೆದಿತ್ತು. ದರ್ಶನ್​ ಪರ ವಾದ ಮಂಡಿಸಿದ ವಕೀಲರು, ವಾದಮಂಡನೆಗೆ ಕೊಂಚ ಕಾಲಾವಕಾಶ ಕೋರಿದ ಹಿನ್ನಲೆ ಇದೀಗ ಕೋರ್ಟ್​ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.

ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎ2  ದರ್ಶನ್‌ ಬೇಲ್‌ ಕೋರಿ ಕೋರ್ಟ್‌ಗೆ ಅರ್ಜಿ  ವಿಚಾರಣೆ ಮತ್ತೆ ಮುಂದೂಡುಲಾಗಿದೆ. ಇಂದು ನ್ಯಾಯಾಲಯ ವಿಚಾರಣೆಗೆ ಕರೆದಿತ್ತು. ದರ್ಶನ್​ ಪರ ವಾದ ಮಂಡಿಸಿದ ವಕೀಲರು, ವಾದಮಂಡನೆಗೆ ಕೊಂಚ ಕಾಲಾವಕಾಶ ಕೋರಿದ ಹಿನ್ನಲೆ ಇದೀಗ ಕೋರ್ಟ್​ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.

ರೇಣುಕಸ್ವಾಮಿ ಭೀಕರ ಹತ್ಯೆಯಲ್ಲಿ ಕನ್ನಡ ಚಿತ್ರನಟ ದರ್ಶನ್ ಎ2 ಆರೋಪಿಯಾಗಿದ್ದು​, ಪವಿತ್ರಾ ಗೌಡ ಎ1 ಆರೋಪಿ. ಈ ಪ್ರಕರಣದಲ್ಲಿ ದರ್ಶನ್​ ಸಹಚರರು ಸದ್ಯ ಜೈಲುಪಾಲಾಗಿದ್ದಾರೆ. ತನ್ನ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ ಸಲ್ಲಿಸಿದ ಒಂದೆರೆಡು ವಾರಗಳ ನಂತರ ಜಾಮೀನು ಕೋರಿ ದರ್ಶನ್​ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​ ಸೆ.27ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.

ಇಂದು ದರ್ಶನ್​ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ಕೋರ್ಟ್​, ಆರೋಪಿ ಪರ ವಾದಮಂಡನೆಗೆ ಕಾಲಾವಕಾಶ ಕೋರಿದ ವಕೀಲ ಸುನೀಲ್​ ಮನವಿ ಮೇರೆಗೆ ಇದೀಗ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.

Ad
Ad
Nk Channel Final 21 09 2023