Bengaluru 22°C
Ad

ಗೇಟ್ ಬಿದ್ದು ಬಾಲಕ ಮೃತ್ಯು ಪ್ರಕರಣ: ತನಿಖೆ ಮಾಡುತ್ತೇವೆ ಎಂದ ಗುಂಡೂರಾವ್

ಬೆಂಗಳೂರಿನ ಬಿಬಿಎಂಪಿ ಆಟದ ಮೈದಾನದಲ್ಲಿ ಆಟವಾಡಲು ಹೋಗಿದ್ದ 10 ವರ್ಷದ ಬಾಲಕನ ಮೇಲೆ ಮೈದಾನದ ಬೃಹತ್ ಕಬ್ಬಿಣದ ಗೇಟ್ ಬಿದ್ದು, ಬಾಲಕ ಸಾವನ್ನಪ್ಪಿರುವ ಘಟನೆಗೆ ಸಂಭಂದಪಟ್ಟಂತೆ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಬೆಂಗಳೂರು : ಬೆಂಗಳೂರಿನ ಬಿಬಿಎಂಪಿ ಆಟದ ಮೈದಾನದಲ್ಲಿ ಆಟವಾಡಲು ಹೋಗಿದ್ದ 10 ವರ್ಷದ ಬಾಲಕನ ಮೇಲೆ ಮೈದಾನದ ಬೃಹತ್ ಕಬ್ಬಿಣದ ಗೇಟ್ ಬಿದ್ದು, ಬಾಲಕ ಸಾವನ್ನಪ್ಪಿರುವ ಘಟನೆಗೆ ಸಂಭಂದಪಟ್ಟಂತೆ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಘಟನೆಯ ಬಗ್ಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈ ಘಟನೆಯಿಂದ ಬಹಳ ನೋವಾಗಿದೆ. ಈ ಬಗ್ಗೆ ಬಿಬಿಎಂಪಿ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಆದ್ರೆ ಇದುವರೆಗೂ ಈ ಗೇಟ್ ಕಳಪೆ ಕಾಮಗಾರಿ ಬಗ್ಗೆಯಾಗಲಿ, ದುರಸ್ತಿ ಬಗ್ಗೆಯಾಗಲಿ ಯಾವುದೇ ದೂರುಗಳು ಬಂದಿಲ್ಲ ಎಂದಿದ್ದಾರೆ.

ಬೆಂಗಳೂರಿನ ಹೃದಯಭಾಗ ಮಲ್ಲೇಶ್ವರಂ ನ ಬಿಬಿಎಂಪಿ ಆಟದ ಮೈದಾನಕ್ಕೆ ಆಟವಾಡಲೆಂದು ಬಾಲಕ ನಿರಂಜನ್ ತೆರಳಿದ್ದು, ಮೈದಾನದ ಗೇಟ್ ಓಪನ್ ಮಾಡುವಾಗ, ತುಕ್ಕು ಹಿಡಿದು ಹಾಳಾಗಿದ್ದ ಗೇಟ್ ಬಾಲಕನ ಮೇಲೆ ಕಳಚಿ ಬಿದ್ದು ಸಾವನ್ನಪ್ಪಿದ್ದ. ಈ ಘಟನೆ ಬೆನ್ನಲ್ಲೇ ಬಿಬಿಎಂಪಿ ವಿರುದ್ಧ ಬೆಂಗಳೂರಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Ad
Ad
Nk Channel Final 21 09 2023