ಬೆಂಗಳೂರು: ಭಾರತದ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರಿಗೆ “ವಾರಕ್ಕೆ 70 ಗಂಟೆಗಳ” ಕೆಲಸದ ಸೂತ್ರದ ಸಲಹೆ ದೇಶದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇತ್ತೀಚೆಗೆ ಈ ಬಗ್ಗೆ ಪ್ರಸ್ತಾಪಿಸಿದ್ದರು. ಅವರ ಹೇಳಿಕೆಗೆ ಸಾಕಷ್ಟು ಪರ – ವಿರೋಧ ಅಭಿಪ್ರಾಯ ಬರುತ್ತಿದ್ದಂತೆ ಪತ್ನಿ ಸುಧಾಮೂರ್ತಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ತಮ್ಮ ಪತಿ ವಾರಕ್ಕೆ 80 ರಿಂದ 90 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ ಮತ್ತು ತಮ್ಮ ಅನುಭವವನ್ನು ಮಾತ್ರ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅವರು ವಾರಕ್ಕೆ 80ರಿಂದ 90 ಗಂಟೆ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಅದಕ್ಕಿಂತ ಕಮ್ಮಿ ಏನು ಅನ್ನೋದು ಅವರಿಗೆ ಗೊತ್ತಿಲ್ಲ. ಅವರು ನಿಜವಾದ ಶ್ರಮವನ್ನು ನಂಬುತ್ತಾರೆ ಮತ್ತು ಅವರು ಹಾಗೆ ಜೀವಿಸುತ್ತಿದ್ದಾರೆ. ಹೀಗಾಗಿ ತನಗೆ ಅನಿಸಿದ್ದನ್ನು ಹೇಳಿದ್ದಾರೆ ಎಂದು ಸುಧಾ ಮೂರ್ತಿ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.