ಬೆಂಗಳೂರು: ವಿಶ್ವವಿಖ್ಯಾತ ತಿರುಪತಿ ತಿರುಮಲ ದೇವಾಲಯದಲ್ಲಿನ ಲಡ್ಡು ಪ್ರಸಾದಕ್ಕೆ ಕರ್ನಾಟಕದ ಹೆಮ್ಮೆಯ ಕೆಎಂಎಫ್ ನಂದಿನಿ ತುಪ್ಪವನ್ನು ಮತ್ತೆ ಬಳಸಲು ಪ್ರಾರಂಭಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಎಫ್, ನಾವು ಮತ್ತೊಮ್ಮೆ ತಿರುಪತಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಘೋಷಿಸಲು ಹೆಮ್ಮೆಪಡುತ್ತೇವೆ. ವಿಶ್ವವಿಖ್ಯಾತ ತಿರುಮಲ ಲಡ್ಡು ಪ್ರಸಾದದಲ್ಲಿ ಕೆಎಂಎಫ್ ನಂದಿನಿ ತುಪ್ಪದ ಸಾರ ಮತ್ತು ಶುದ್ಧತೆಯನ್ನು ಅನುಭವಿಸಬಹುದು. ಕೆಎಂಎಫ್ ನಂದಿನಿಯ ಮೇಲಿನ ನಂಬಿಕೆಗಾಗಿ ಟಿಟಿಡಿ ಆಡಳಿತಕ್ಕೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದೆ.
ಕಳೆದ ವರ್ಷ ಉಂಟಾಗಿದ್ದ ಗೊಂದಲಗಳಿಂದಾಗಿ ತಿರುಪತಿ ದೇವಾಲಯದಲ್ಲಿ ಲಡ್ಡಿನಲ್ಲಿ ಬಳಸಲಾಗುತ್ತಿದ್ದ ನಂದಿನಿ ತುಪ್ಪದ ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ತಯಾರಿಸಲಾಗುವ ಲಡ್ಡಿಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಇದೀಗ ಮತ್ತೆ ನಂದಿನ ತುಪ್ಪ ಬಳಸಲು ಪ್ರಾರಂಭಿಸಲಾಗಿದೆ.
Ad