ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಉಗ್ರನನ್ನು ಕರೆತಂದು ಎನ್ ಐ ಎ ಅಧಿಕಾರಿಗಳು ದೃಶ್ಯ ಮರುಸೃಷ್ಟಿ ಮಾಡಿದ್ದಾರೆ.
ಇಂದು ಬೆಳಗ್ಗೆ ಎನ್ ಐ ಎ ಅಧಿಕಾರಿಗಳು ಉಗ್ರನನ್ನು ಸ್ಥಳಕ್ಕೆ ಕರೆತಂದು ಡ್ರಿಲ್ ನಡೆಸಿತು. ಬಾಂಬ್ ಇಟ್ಟಂತಹ ಉಗ್ರ ಮುಜಾವೀರ್ ಹುಸೇನ್ ಶಾಜಿಬ್ ನನ್ನು ಕರೆತರಲಾಗಿದೆ.
ರಾಮೇಶ್ವರಂ ಕೆಫೆ ಸುತ್ತಮುತ್ತಲಿನ ಪ್ರದೇಶವನ್ನು ಬಂದ್ ಮಾಡಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬ್ಲಾಸ್ಟ್ ಸೀನ್ ರಿಕ್ರಿಯೇಟ್ ಮಾಡಿಸಲಾಯಿತು. ಆರೋಪಿ ಮುಜಾವೀರ್ ನಡೆದುಕೊಂಡ ಬಂದ ಶೈಲಿ, ಎಲ್ಲೆಲ್ಲಿ ಸುತ್ತಾಡಿದ, ಕೆಫೆ ಒಳಗೆ ಎಲ್ಲಿ ಬ್ಯಾಗ್ ಇಟ್ಟ. ಹೀಗೆ ಪ್ರತಿಯೊಂದು ಕೃತ್ಯವನ್ನು ಉಗ್ರನಿಂದಲೇ ರಿಕ್ರಿಯೇಟ್ ಮಾಡಿಸಲಾಯಿತು.
ಮಾರ್ಚ್ 1ರಂದು ಬೆಂಗಳೂರಿನ ಐಟಿಪಿಎಲ್ ರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರ ಸಹಿತ ಒಟ್ಟು 9 ಜನ ಗಾಯಗೊಂಡಿದ್ದರು.
Ad