Ad

ಸ್ಪೈಸ್​​​ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ : 12 ಗಂಟೆಗಳಿಂದ ಪ್ರಯಾಣಿಕರು ಲಾಕ್‌

ದೆಹಲಿಯಿಂದ ಬೆಂಗಳೂರಿಗೆ ಹಾರಬೇಕಿದ್ದ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ಸಿಬ್ಬಂದಿ ಎಡವಟ್ಟಿನಿಂದಾಗಿ ಪ್ರಯಾಣಿಕರು ಹತ್ತು ಗಂಟೆಗಳ ಕಾಲ ವಿಮಾನದಲ್ಲೇ ಲಾಕ್ ಆಗಿ ಪರದಾಡುವಂತಹ ಪರಿಸ್ಥಿತಿ ನಡೆದಿದೆ.

ದೇವನಹಳ್ಳಿ: ದೆಹಲಿಯಿಂದ ಬೆಂಗಳೂರಿಗೆ ಹಾರಬೇಕಿದ್ದ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ಸಿಬ್ಬಂದಿ ಎಡವಟ್ಟಿನಿಂದಾಗಿ ಪ್ರಯಾಣಿಕರು ಹತ್ತು ಗಂಟೆಗಳ ಕಾಲ ವಿಮಾನದಲ್ಲೇ ಲಾಕ್ ಆಗಿ ಪರದಾಡುವಂತಹ ಪರಿಸ್ಥಿತಿ ನಡೆದಿದೆ. ನಿನ್ನೆ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೋಗುವ SG 8151ನ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನವನ್ನು ಏರಿದ ಸುಮಾರು 60 ಪ್ರಯಾಣಿಕರು ಸತತ 12 ಗಂಟೆಗಳಿಗೂ ಅಧಿಕ ಕಾಲ ವಿಮಾನದೊಳಗೆ ಲಾಕ್ ಆಗಿ ಪರದಾಡಿದ್ದಾರೆ.

Ad
300x250 2

ತಾಂತ್ರಿಕ ದೋಷ ಎಂದು ನಿನ್ನೆ ಸಂಜೆಯಿಂದ ಬೆಳಗ್ಗೆ ವರೆಗೂ ದೆಹಲಿ ಏರ್ಪೋಟ್​ನಲ್ಲೆ ಫ್ಲೈಟ್ ನಿಲ್ಲಿಸಲಾಗಿದ್ದು ಪ್ರಯಾಣಿಕರನ್ನು ಹೊರಗೆ ಬಿಡದೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಅಲ್ಲದೆ ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆಯೂ ಮಾಡದೆ ಫ್ಲೈಟ್​ನಲ್ಲೇ ಕೂರಿಸಿದ್ದಾರೆ. ಆಚೆಯೂ ಹೋಗಲಾಗದೆ ಒಳಗೂ ಇರಲಾಗದೆ ಪರದಾಡುತ್ತಿರುವ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.

ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನ ನಿನ್ನೆ ರಾತ್ರಿ 7.40ಕ್ಕೆ ದೆಹಲಿಯ ಟರ್ಮಿನಲ್ 3 ಯಿಂದ ಟೇಕಾಫ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಟೇಕಾಫ್ ಆಗಿಲ್ಲ. ಬೆಳಗಿನ ಜಾವ 7 ಗಂಟೆಯಾದರೂ ವಿಮಾನ ದೆಹಲಿಯಿಂದ ಹೊರಡಿಲ್ಲ. ಆದಷ್ಟು ಬೇಗ ಟೇಕಾಫ್ ಮಾಡ್ತೀವಿ ಎಂದು ಸಿಬ್ಬಂದಿ ತಿಳಿಸಿದ್ದಾರೆ.

 

Ad
Ad
Nk Channel Final 21 09 2023
Ad