Ad

ಬೆಂಗಳೂರಿನ ಪ್ರತಿಷ್ಠಿತ ಕಾಫಿ ಶಾಪ್‌ನ ಮಹಿಳಾ ವಾಶ್‌ರೂಮ್‌ನಲ್ಲಿ ಕಳ್ಳ ಕ್ಯಾಮರಾ !

Cam

ಬೆಂಗಳೂರು: ಸಂಸ್ಥೆಯ ಉದ್ಯೋಗಿಯೇ ಬೆಂಗಳೂರಿನ ಪ್ರತಿಷ್ಠಿತ ಥರ್ಡ್‌ ವೇವ್‌ ಕಾಫಿ ಔಟ್‌ಲೆಟ್‌ನ ಮಹಿಳೆಯರ ಶೌಚಾಲಯದಲ್ಲಿ ಕಳ್ಳ ಕ್ಯಾಮರಾ ಇರಿಸಿದ್ದು, ಆತನನ್ನು ಬಂಧಿಸಲಾಗಿದೆ.  ಬೆಂಗಳೂರಿನ ಬಿಇಎಲ್‌ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ.

ಮಹಿಳೆಯ ಶೌಚಾಲಯದಲ್ಲಿರುವ ಕಸದ ಬುಟ್ಟಿಯಲ್ಲಿ ವೀಡಿಯೋ ರೆಕಾರ್ಡ್ ಆನ್ ಆಗಿರುವ ಸ್ಥಿತಿಯಲ್ಲಿ ಫೋನ್ ಪತ್ತೆಯಾಗಿದೆ. ಶೌಚಾಲಯಕ್ಕೆ ಹೋಗಿದ್ದ ಮಹಿಳೆಯೊಬ್ಬರ ಕಣ್ಣಿಗೆ ಈ ಫೋನ್ ಬಿದ್ದಿದ್ದು, ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಿನ್ನೆ ಈ ಘಟನೆ ನಡೆದಿದ್ದು, ಥರ್ಡ್ ವೇವ್ ಕಾಫಿ ಶಾಪ್‌ ಸಿಬ್ಬಂದಿಯ ಫೋನೇ ಇದಾಗಿದೆ. ಮಹಿಳೆಯರ ಶೌಚಾಲಯದಲ್ಲಿ ರಹಸ್ಯವಾಗಿ ವೀಡಿಯೋ ಮಾಡುವುದಕ್ಕಾಗಿ ಆತ ಈ ಫೋನ್ ಅನ್ನು ಇರಿಸಿದ್ದ. ಮಹಿಳೆಯ ಕಣ್ಣಿಗೆ ಫೋನ್ ಬಿದ್ದ ವೇಳೆ  ಎರಡು ಗಂಟೆಗಳಿಂದ ಈ ಫೋನ್‌ನಲ್ಲಿ ರೆಕಾರ್ಡಿಂಗ್ ಆನ್ ಆದ ಸ್ಥಿತಿಯಲ್ಲಿ ಇತ್ತು ಎಂದುವ ವರದಿ ಆಗಿದೆ.  ಘಟನೆ ನಡೆಯುವ ವೇಳೆ ಥರ್ಡ್‌ ವೇವ್‌ ಕಾಫಿ ಔಟ್‌ಲೆಟ್‌ನಲ್ಲಿದ್ದ ಗ್ರಾಹಕರೊಬ್ಬರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡ ಮಹಿಳೆ ಹೇಳುವ ಪ್ರಕಾರ, ಈ ಫೋನ್ ಫ್ಲೈಟ್ ಮೋಡ್‌ನಲ್ಲಿತ್ತು. ಹೀಗಾಗಿ ಯಾವುದೇ ಸೌಂಡ್ ಈ ಫೋನ್‌ನಿಂದ ಬರುತ್ತಿರಲಿಲ್ಲ, ಬಹಳ ಜಾಗರೂಕವಾಗಿ ಇದನ್ನು ಕಸದ ಬುಟ್ಟಿಯಲ್ಲಿ ಇಡಲಾಗಿತ್ತು. ರೆಕಾರ್ಡ್ ಮಾಡುವುದಕ್ಕಾಗಿ ಬರೀ ಕ್ಯಾಮರಾದ ಲೆನ್ಸ್ ಮಾತ್ರ ಕಾಣುವಂತೆ ಡಸ್ಟ್‌ಬಿನ್‌ಗೆ ಸಣ್ಣ ತೂತು ಮಾಡಲಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಈ ಫೋನ್ ಅಲ್ಲೇ ಕೆಲಸ ಮಾಡುತ್ತಿದ್ದ ಯುವಕನಿಗೆ ಸೇರಿದ್ದು ಎಂಬುದು ನಿಮಿಷದಲ್ಲೇ ಗೊತ್ತಾಗಿತ್ತು. ನಂತರ ಸ್ಥಳಕ್ಕೆ ಪೊಲೀಸರನ್ನು ಕರೆಸಿ ಕ್ರಮ ಕೈಗೊಳ್ಳಲಾಯ್ತು ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Ad
Ad
Nk Channel Final 21 09 2023