Bengaluru 27°C
Ad

ʼಸ್ಲೀಪ್​​ ಚಾಂಪಿಯನ್​’: ನಿದ್ದೆ ಮಾಡಿ 9 ಲಕ್ಷ ರೂಪಾಯಿ ಗೆದ್ದ ಬೆಂಗಳೂರಿನ ಯುವತಿ

Sleeping

ಬೆಂಗಳೂರು: ಅತಿಯಾದ ನಿದ್ದೆ ಕಾಯಿಲೆಗೆ ಆಹ್ವಾನ. ನಿದ್ದೆ ಹೆಚ್ಚು ಮಾಡಿದರೆ ಸಮಸ್ಯೆ ಎದುರಾಗುವ ಸ್ಥಿತಿ ಬರಬಹುದು. ಆದರೆ ವಿಚಾರ ಅದಲ್ಲ ನಿದ್ದೆ ಮಾಡಿ ಕೂಡ ಹಣ ಗಳಿಸಿರುವ ಪ್ರಸಂಗವೊಂದು ನಡೆದಿದೆ. ಹೌದು. . .ಬೆಂಗಳೂರು ಮೂಲದ ಯುವತಿಯೊಬ್ಬಳು ನಿದ್ದೆ ಮಾಡುವ ಮೂಲಕ 9 ಲಕ್ಷ ರೂಪಾಯಿ ಗೆದ್ದಿದ್ದಾಳೆ.

ಬೆಂಗಳೂರು ಮೂಲದ ಬ್ಯಾಂಕರ್​​ ಆಗಿರುವ ಸಾಯಿಶ್ವರಿ ಪಾಟೀಲ್​ ಎಂಬಾಕೆ ವೇಕ್​ಫಿಟ್​​ನ ವಿಶಿಷ್ಟ ಇಂಟರ್ನ್​ಶಿಪ್​ ಕಾರ್ಯಕ್ರಮದ 3ನೇ ಸೀಸನ್​​ನಲ್ಲಿ ‘ಸ್ಲೀಪ್​​ ಚಾಂಪಿಯನ್​’ ಎಂಬ ಪಟ್ಟ ಅಲಂಕರಿಸಿಕೊಂಡಿದ್ದಾಳೆ. ಮಾತ್ರವಲ್ಲದೆ ನಿದ್ರಿಸುವ ಇಂಟರ್ನ್​​ಶಿಪ್​ ಮೂಲಕ 9 ಲಕ್ಷ ರೂಪಾಯಿ ಗೆದ್ದಿದ್ದಾಳೆ.

ವಿಶ್ರಾಂತಿ ಪಡೆಯಲು ಹೆಣಗಾಡುತ್ತಿರುವವರಿಗಾಗಿ ಸ್ಲೀಪ್​​ ಇಂಟರ್​​ಶಿಪ್​ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಭಾಗವಹಿಸುವವರು ಪ್ರತಿ ರಾತ್ರಿ ಕನಿಷ್ಠ 8ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ.

ಸಾಯಿಶ್ವರಿ ಪಾಟೀಲ್​ ಕೂಡ ಇದರಲ್ಲಿ ಒಬ್ಬರಾಗಿ ಭಾಗವಹಿಸಿದ್ದರು. ಪ್ರೀಮಿಯಂ ಹಾಸಿಗೆ ಮತ್ತು ಸಂಪರ್ಕವಿಲ್ಲದ ಟ್ರ್ಯಾಕರನ್ನು ಇದರಲ್ಲಿ ಒದಗಿಸಲಾಗುತ್ತದೆ. ಇಂಟರ್ನ್​ಗಳು ತಮ್ಮ ನಿದ್ರೆಯ ಅಭ್ಯಾಸವನ್ನು ಹೆಚ್ಚಿಸಲು ಅನುಭವಿ ಮಾರ್ಗದರ್ಶಕರ ಕಾರ್ಯಾಗಾರಗಳಲ್ಲಿ ಹಾಜರಾಗಬೇಕಿದೆ. ಇಂಟರ್​ಶಿಪ್​ಗೆ ಆಯ್ಕೆಯಾದವರಿಗೆ ಹಲವು ಪ್ರಕ್ರಿಯೆಗಳ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ವಿಡಿಯೋ ಕರೆಯಲ್ಲಿ ಅಭ್ಯರ್ಥಿಗಳು ನಿದ್ರೆ ಮಾಡುವ ಉತ್ಸುಹಕತೆಯನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಫೈನಲಿಸ್ಟ್​ಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಕುರಿತಾಗಿ ವೈಯ್ಯಕ್ತಿಕ ಸಂದರ್ಶನಗಳಿಗೆ ಒಳಗಾದರು. ಅದರಂತೆ ಸಾಯಿಶ್ವರಿ ಪಾಟೀಲ್​ ವೇಕ್​ಫಿಟ್​​ನ ವಿಶಿಷ್ಟ ಇಂಟರ್ನ್​ಶಿಪ್​ ಕಾರ್ಯಕ್ರಮದ 3ನೇ ಸೀಸನ್​​ನಲ್ಲಿ ‘ಸ್ಲೀಪ್​​ ಚಾಂಪಿಯನ್​’ ಎಂಬ ಪಟ್ಟ ಗೆದ್ದಿದ್ದಾಳೆ.

Ad
Ad
Nk Channel Final 21 09 2023