ಬೆಂಗಳೂರು : ರಾಜ್ಯ ಸರ್ಕಾರ ಬಿಯರ್ ದರ ಹೆಚ್ಚಿಗೆ ಮಾಡಲು ಚಿಂತನೆ ನಡೆಸಿದೆ. ಈಗಾಗಲೇ ಕಳೆದಾಗ 15 ತಿಂಗಳಲ್ಲಿ ಎರಡೆರಡು ಬಾರಿ ಮದ್ಯದ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಇದೀಗ ಮೂರನೇ ಬಾರಿ ಬಿಯರ್ ಮೇಲಿನ ದರ ಏರಿಕೆಗೆ ಮುಂದಾಗಿದ್ದು, ಅಕ್ಟೋಬರ್ ಆರಂಭದಿಂದ ಈ ಹೊಸ ದರ ಜಾರಿಗೆ ಬರುವ ಸಾಧ್ಯತೆಯಿದೆ.
ಪ್ರತಿ ಬಾಟಲಿ ಬಿಯರ್ ಮೇಲಿನ ದರವನ್ನ 10ರಿಂದ 15 ರೂಪಾಯಿ ಏರಿಸಲು ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅಂಗೀಕರಿಸುವ ಎಲ್ಲಾ ಸಾಧ್ಯತೆಗಳಿದ್ದು, ರಾಜ್ಯದಲ್ಲಿ ಬಿಯರ್ ಇನ್ನಷ್ಟು ದುಬಾರಿಯಾಗುತ್ತದೆ.
Ad