Ad

ರೀಲ್ಸ್ ಶೋಕಿದಾರನಿಗೆ ಡಮ್ಮಿ ಗನ್ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಸ್ಯಾಂಡಲ್ ವುಡ್ ಟೆಕ್ನಿಷಿಯನ್

ರೀಲ್ಸ್ ಹುಚ್ಚಿಗಾಗಿ ಸಾರ್ವಜನಿಕ ಸ್ಥಳದಲ್ಲಿ ಎಕೆ 47 ಮಾದರಿ ಗನ್ ಪ್ರದರ್ಶಿಸಿದ ವಿಚಾರಕ್ಕೆ ರೀಲ್ಸ್ ಮಾಡ್ತಿದ್ದ ಅರುಣ್ ಕಟಾರೆಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದರು. ಸದ್ಯ ಈ ಅರುಣ್ ಕಟಾರೆಗೆ ಗನ್ ಸಪ್ಲೈ ಮಾಡಿದ ಆರೋಪದಲ್ಲಿ ಹಲವಾರು ಸಿನಿಮಾಗಳಿಗೆ ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ್ದವನಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ.

ಬೆಂಗಳೂರು: ರೀಲ್ಸ್ ಹುಚ್ಚಿಗಾಗಿ ಸಾರ್ವಜನಿಕ ಸ್ಥಳದಲ್ಲಿ ಎಕೆ 47 ಮಾದರಿ ಗನ್ ಪ್ರದರ್ಶಿಸಿದ ವಿಚಾರಕ್ಕೆ ರೀಲ್ಸ್ ಮಾಡ್ತಿದ್ದ ಅರುಣ್ ಕಟಾರೆಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದರು. ಸದ್ಯ ಈ ಅರುಣ್ ಕಟಾರೆಗೆ ಗನ್ ಸಪ್ಲೈ ಮಾಡಿದ ಆರೋಪದಲ್ಲಿ ಹಲವಾರು ಸಿನಿಮಾಗಳಿಗೆ ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ್ದವನಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ.

Ad
300x250 2

ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ಟೆಕ್ನಿಷಿಯನ್ ಸಾಹಿಲ್ ಸಿನಿಮಾಗಳಿಗೆ ಗನ್ ಸಪ್ಲೈ ಮಾಡಿಕೊಂಡಿದ್ದರೆ ಈ ಸಮಸ್ಯೆ ಬರ್ತಿರ್ಲಿಲ್ಲ. ಬದಲಿಗೆ ರೀಲ್ಸ್ ಮಾಡೋರಿಗೆ ಬಿಟ್ಟಿ ಬಿಲ್ಡಪ್ ಕೊಡೋರಿಗೆ ಬೇಕಾಬಿಟ್ಟಿಯಾಗಿ ಗನ್ ಕೊಟ್ಟು ಸದ್ಯ ಪೇಚಿಗೆ ಸಿಲುಕಿದ್ದಾರೆ. ಸಾಹಿಲ್ ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕಬ್ಜ, ಭೈರತಿ ರಣಗಲ್, ಮಪ್ತಿ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸಿದ್ದಾರೆ.

ಇದೇ ಸಾಹಿಲ್ ಬಳಿ ಡಮ್ಮಿ ಗನ್ ಬಾಡಿಗೆ ಪಡೆದಿದ್ದ ಅರುಣ್ ಕಟಾರೆ. ಆದರೆ ಸಾಹಿಲ್ ಅರುಣ್ ಗೆ ಗನ್ ನೀಡುವಾಗೆ ಯಾವೂದೇ ಪೂರ್ವಪರ ತಿಳಿದುಕೊಂಡಿರ್ಲಿಲ್ಲ. ಬದಲಿಗೆ ಯಾವ ಕಾರಣಕ್ಕೆ ಯಾವ ಸ್ಥಳದಲ್ಲಿ ಗನ್ ಬಳಸ್ತಾರೆ ಅನ್ನೋದನ್ನು ಕೇಳದೆ ಹಣ ಪಡೆದು ಗನ್ ನೀಡಿದರು. ಇದೇ ಕಾರಣಕ್ಕೆ ಸಾಹಿಲ್ ಗೆ ಸಂಕಷ್ಟ ಎದುರಾಗಿದ್ದು ಕೊತ್ತನೂರು ಪೊಲೀಸರು ನೋಟೀಸ್ ನೀಡಿದ್ದಾರೆ.

Ad
Ad
Nk Channel Final 21 09 2023
Ad