ಬೆಂಗಳೂರು: ರಾಜಧಾನಿಯಲ್ಲಿಹೋಟೆಲ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ವ್ಯಾಪಾರ-ವಹಿವಾಟು ಅವಧಿಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೋಟೆಲ್ ಮಾಲೀಕರ ಸಂಘದ ಮನವಿ ಪುರಸ್ಕರಿಸಿರುವ ಸರ್ಕಾರ, ಬೆಳಗ್ಗೆ 9ರಿಂದ ರಾತ್ರಿ 1 ಗಂಟೆವರೆಗೆ ವ್ಯಾಪಾರ-ವಹಿವಾಟು ನಡೆಸಲು ಅನುಮತಿ ನೀಡಿದೆ.
Ad
ಈ ಬಗ್ಗೆ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮೀ ಸಾಗರ್ ಎನ್.ಕೆ. ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ಸಿಎಲ್ 4, ಸಿಎಲ್ 6, ಸಿಎಲ್ 7, ಸಿಎಲ್ 7D ಲೈಸೆನ್ಸ್ ಪಡೆದ ಹೋಟೆಲ್, ಕ್ಲಬ್, ರೆಸ್ಟೋರೆಂಟ್‌ಗೆ ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆವರೆಗೆ ಹಾಗೂ ಸಿಎಲ್ 9 ಲೈಸೆನ್ಸ್ ಪಡೆದ ಬಾರ್‌ಗಳಿಗೆ ಬೆಳಗ್ಗೆ 10ರಿಂದ ಮಧ್ಯರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟಿನ ಸಮಯ ನಿಗದಿಪಡಿಸಲಾಗಿದೆ.
Ad
Ad