ಬೆಂಗಳೂರು: ಈ ಬಾರಿ ಗಾಂಧಿ ಜಯಂತಿ ಮತ್ತು ಮಹಾಲಯ ಅಮಾವಾಸ್ಯೆ ಒಂದೇ ದಿನ ಬಂದಿದೆ. ಗಾಂಧಿಜಯಂತಿ ದಿನ ಮಾಂಸ ಮಾರಾಟ ನಿಷೇಧ ಇರಲಿದೆ. ಹೀಗಾಗಿ ಮಹಾಲಯ ಅಮಾವಾಸ್ಯೆ ಇರುವುದರಿಂದ ಪಿತೃಪಕ್ಷ ಮಾಡೋರಿಗೆ ಮಾಂಸದ ಕೊರತೆ ಎದುರಾಗಲಿದೆ.
ಮಾಂಸ ಮಾರಾಟ ನಿಷೇಧ ಮಾಡಿದರೆ ಮಾಂಸ ಸಿಗಲ್ಲ. ಅದಕ್ಕಾಗಿ ಗಾಂಧಿ ಜಯಂತಿ ದಿನ ಮಾಂಸ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಘಟನೆಗಳು, ಸಮಿತಿಗಳು ಮನವಿ ಮಾಡಿಕೊಂಡಿದೆ.
ಈ ಸಂಬಂಧ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ವಿ.ವಿ ಸತ್ಯನಾರಾಯಣ ಹಾಗೂ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕಯ ಅಧ್ಯಕ್ಷ ಬಿ.ಎಂ ಶಿವಕುಮಾರ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಕಾಕತಾಳಿಯವಾಗಿ ಒಂದೇ ದಿನ ಎರಡು ಆಚರಣೆ ಬಂದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಪಿತೃಪಕ್ಷ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರ ಸಲ್ಲಿಸಲಾಗಿದೆ.
Ad