Bengaluru 27°C

ರೇಣುಕಾಸ್ವಾಮಿ ಕೊಲೆ ಪ್ರಕರಣ: ಶೇ.70ರಷ್ಟು ರಿಪೋರ್ಟ್ ಕೈ ಸೇರಿದೆ ಎಂದ ಕಮಿಷನರ್ ಬಿ. ದಯಾನಂದ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ 2 ತಿಂಗಳು 9 ದಿನವಾಗಿದೆ. ಆರೋಪಿಗಳಾದ ದರ್ಶನ್​​​ ಮತ್ತು ಗ್ಯಾಂಗ್​ನಿಂದ ನಡೆದ ಕೊಲೆ ಕೇಸ್ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಕುರಿತು ಕಮಿಷನರ್ ಬಿ. ದಯಾನಂದ್ ಮಾತನಾಡಿದ್ದಾರೆ.

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ 2 ತಿಂಗಳು 9 ದಿನವಾಗಿದೆ. ಆರೋಪಿಗಳಾದ ದರ್ಶನ್​​​ ಮತ್ತು ಗ್ಯಾಂಗ್​ನಿಂದ ನಡೆದ ಕೊಲೆ ಕೇಸ್ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಕುರಿತು ಕಮಿಷನರ್ ಬಿ. ದಯಾನಂದ್ ಮಾತನಾಡಿದ್ದಾರೆ.


ರೇಣುಕಾಸ್ವಾಮಿ ಕೊಲೆ ಕೇಸ್​​ ತನಿಖೆ ಅಂತಿಮ ಘಟ್ಟ ತಲುಪಿದೆ. ಮೌಖಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಸಂಗ್ರಹಿಸಲಾಗಿತ್ತು. ವರದಿಗಾಗಿ ಸಾಕ್ಷಿಗಳನ್ನು ಎಫ್ಎಸ್ಎಲ್​ಗೆ ಕಳುಹಿಸಲಾಗಿತ್ತು. ಶೇ.70 ರಷ್ಟು FSL ರಿಪೋರ್ಟ್ ಬಂದಿದ್ದು, ಇನ್ನೂ ಕೆಲವು ಬಾಕಿ FSL ವರದಿ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತೆ ಎಂದು ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ.


ಕೊಲೆ ಪ್ರಕರಣ ಸಂಬಂಧ ಹೇರ್ ಸ್ಯಾಂಪಲ್ ರಿಪೋರ್ಟ್ ಪೊಲೀಸರ ಕೈ ಸೇರಿದೆ. ಕಾರಿನಲ್ಲಿ ರೇಣುಕಾಸ್ವಾಮಿ ಶವ ಸಾಗಾಟ ಮಾಡಿದ್ದು ದೃಢವಾಗಿದೆ. ಕಾರು ಪರಿಶೀಲನೆ ವೇಳೆ ಕೂದಲು ಪತ್ತೆಯಾಗಿತ್ತು. ಹೇರ್ ಸ್ಯಾಂಪಲ್ FSL​​ಗೆ ಕಳುಹಿಸಿದ್ದರು. ಆರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಶವ ಸಾಗಿಸಿದ್ದ ಆರೋಪಿಗಳಿದ್ದೇ ಹೇರ್ ಅಂತ ದೃಢವಾಗಿದೆ. ಸದ್ಯ ಅದರ ರಿಪೋರ್ಟ್ ಪೊಲೀಸರ ಕೈಸೇರಿದೆ.


Nk Channel Final 21 09 2023