ಬೆಂಗಳೂರು: ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರು ಸಂತಾಪ ಸೂಚಿಸಿದ್ದಾರೆ. ರತನ್ ಟಾಟಾ ಅವರ ಸಾವಿನಿಂದ ಯುಗ ಅಂತ್ಯವಾಯಿತು ಎಂದು ಹೇಳಿದ್ದಾರೆ.
ರತನ್ ಟಾಟಾ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರು, ರತನ್ ಟಾಟಾ ಅವರು ಸರಳ ವ್ಯಕ್ತಿ. ಯಾವಾಗಲೂ ಇತರರ ಬಗ್ಗೆ ಕಾಳಜಿ ಹೊಂದಿರುವಂತ ಸಹಾನುಭೂತಿ ವ್ಯಕ್ತಿತ್ವದವರು. ಇಂದು ನಾವೆಲ್ಲ ಅವರನ್ನು ಕಳೆದುಕೊಂಡಿದ್ದೇವೆ.
ಇಡೀ ಜೀವನದಲ್ಲಿ ಅವರಂತ ವ್ಯಕ್ತಿಯನ್ನು ನಾನು ಯಾರನ್ನೂ ಕಾಣಲಿಲ್ಲ. ಅವರನ್ನ ಭೇಟಿಯಾಗಿರುವುದು ನನ್ನ ಅದೃಷ್ಟ. ವ್ಯಕ್ತಿ, ಸ್ಥಳ, ಸಮಯಕ್ಕೆ ಹೊತ್ತು ಕೊಡುತ್ತಿದ್ದರು. ಅವರು ದಂತಕಥೆಯಾಗಿದ್ದರು. ಅವರದೇ ಒಂದು ಯುಗವಿತ್ತು. ಅದು ಇಲ್ಲಿಗೆ ಕೊನೆಯಾಯಿತು. . ನಾನು ಕಳೆದುಕೊಂಡ ಮಹಾನ್ ವ್ಯಕ್ತಿ ಅವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಅಂತ ಸುಧಾಮೂರ್ತಿ ಅವರು ಹೇಳಿದ್ದಾರೆ.
Ad