Bengaluru 17°C

ತಾಯಿ ಮೇಲೆ ಅತ್ಯಾಚಾರ, ಮಗನ ಮೇಲೂ ಹಲ್ಲೆ : 9 ಆರೋಪಿಗಳ ಅರೆಸ್ಟ್‌

ತಾಯಿ-ಮಗನನ್ನು ಕಿಡ್ನ್ಯಾಪ್‌ ಮಾಡಿ ಕಿರುಕುಳ ನೀಡಿದ ಆರೋಪದಲ್ಲಿ 9 ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕಿಡ್ನ್ಯಾಪ್‌ ಆಗಿದ್ದ ಯುವಕನ ಮೇಲೆ ಕಳ್ಳತನ ಪ್ರಕರಣಗಳಿದ್ದವು. ಹೀಗಾಗಿ ಹಣ ವಸೂಲಿ ಮಾಡಲು ಯುವಕ ಹಾಗೂ ಆತನ ತಾಯಿಯನ್ನು ಆರೋಪಿಗಳು ಅಪಹರಿಸಿ, ಕಿರುಕುಳ ನೀಡಿದ್ದರು. ಹೀಗಾಗಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ತಾಯಿ-ಮಗನನ್ನು ಕಿಡ್ನ್ಯಾಪ್‌ ಮಾಡಿ ಕಿರುಕುಳ ನೀಡಿದ ಆರೋಪದಲ್ಲಿ 9 ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕಿಡ್ನ್ಯಾಪ್‌ ಆಗಿದ್ದ ಯುವಕನ ಮೇಲೆ ಕಳ್ಳತನ ಪ್ರಕರಣಗಳಿದ್ದವು. ಹೀಗಾಗಿ ಹಣ ವಸೂಲಿ ಮಾಡಲು ಯುವಕ ಹಾಗೂ ಆತನ ತಾಯಿಯನ್ನು ಆರೋಪಿಗಳು ಅಪಹರಿಸಿ, ಕಿರುಕುಳ ನೀಡಿದ್ದರು. ಹೀಗಾಗಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ವರುಣ್ ಮತ್ತು ಆತನ ತಾಯಿಯನ್ನು ಅಪಹರಣ ಮಾಡಲಾಗಿತ್ತು. ರೌಡಿ ಶೀಟರ್‌ಗಳಾದ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನಾ, ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳು.


ಏನಿದು ಪ್ರಕರಣ,
ವರುಣ್ ಹಾಗೂ ತಾಯಿ ಇಬ್ಬರು ಸೇರಿ ಕಳ್ಳತನ ಮಾಡಿರುವ ವಿಚಾರ ಆರೋಪಿಗಳಿಗೆ ತಿಳಿದಿತ್ತು. ಹಾಗಾಗಿ ಕಳ್ಳತನ ಮಾಡಿರುವ ಹಣ ನೀಡುವಂತೆ ತಾಯಿ-ಮಗನನ್ನು ಆರೋಪಿಗಳು ಬೆದರಿಸಿದ್ದರು. ಆದರೆ, ಅವರು ಹಣ ನೀಡದ ಹಿನ್ನೆಲೆ ತಾಯಿ- ಮಗನನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು.


ಆ. 13ರಂದು ತಾಯಿ-ಮಗನನ್ನು ಆರೋಪಿಗಳಾದ ಜೋಸೇಫ್ ಮತ್ತು ಶ್ರೀನಿವಾಸ್@ಪಾಗಲ್ ಸೀನಾ ಕಿಡ್ನ್ಯಾಪ್‌ ಮಾಡಿದ್ದರು. ನಂತರ ಪರಿಚಯಸ್ಥ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ನೀಡಲಾಗಿದೆ. ಈ ವೇಳೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು.


 

Nk Channel Final 21 09 2023