ಬೆಂಗಳೂರು: ನಗರದಲ್ಲಿ ನಡೆದ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ನ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಮಿಂಚಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಪೋಟಕ್ಕೆ IED ಬಳಸಿದ್ರೂ ಹೇಗೆ ಬ್ಲಾಸ್ಟ್ ಮಾಡಿದ್ರು ಅನ್ನೋ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ರಾಮೇಶ್ವರ ಕೆಫೆಯಲ್ಲಿ ಬ್ಲಾಸ್ಟ್ ಆದ ಬಾಂಬ್ನಲ್ಲಿ IED ಸುಧಾರಿತ ಸ್ಫೋಟಕ ಡಿವೈಸ್ ಬಳಸಿರುವುದು ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಲಾದ ಡಿವೈಸ್ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಬಾಂಬ್ ಅನ್ನ ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನ ಬಳಸಿ ಸಿದ್ಧಪಡಿಸಲಾಗುತ್ತದೆ.
ಮೊಳೆಗಳು, ಗಾಜಿನ ಚೂರು, ಗನ್ ಪೌಡರ್ ಅಥವಾ ಬೆಂಕಿ ಕಡ್ಡಿಯ ಮದ್ದುಗಳನ್ನೂ ಬಳಸಿ ತಯಾರಿಸಬಹುದು. ಪ್ರೆಷರ್ ಆಗುವಂತೆ ಡಿವೈಸ್ ಅನ್ನು ಸೃಷ್ಟಿಸಿ ಸ್ಫೋಟಿಸಬಹುದು. ಕಚ್ಚಾ ವಸ್ತುಗಳ ಪ್ರಮಾಣ ಹೆಚ್ಚಾದಂತೆ ತೀವ್ರತೆ ಪಡೆದುಕೊಳ್ಳುತ್ತೆ. ಜಿಲೇಟಿನ್ಗಳನ್ನ ಬಳಸಿ ಈ ಪ್ಲಾಸ್ಟಿಕ್ ಸ್ಫೋಟಕ ತಯಾರಿಕೆ ಮಾಡಲಾಗಿದೆ. ಪುಟ್ಟಿ ಎಕ್ಸ್ಪ್ಲೋಸಿವ್ ಅಂತಲೂ ಈ ಪ್ಲಾಸ್ಟಿಕ್ ಎಕ್ಸ್ಪ್ಲೋಸಿವ್ಗಳನ್ನ ಕರೆಯಲಾಗುತ್ತದೆ. ಈ ರೀತಿ ಮಾಡಿರುವ ಡಿವೈಸನ್ನು ಯಾವುದೇ ಮೆಟಲ್ ಡಿಟೆಕ್ಟರ್ ಕಂಡು ಹಿಡಿಯಲ್ಲ. ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಸಲೀಸಾಗಿ ತೆಗೆದುಕೊಂಡು ಹೋಗಬಹುದು. ಆದ್ರೆ ಸ್ಲೀಪರ್ ಸೆಲ್ಗಳಿಲ್ಲದೆ IED ಬಾಂಬ್ ತಯಾರಿಸುವುದು ಸುಲಭವಲ್ಲ. ಸ್ಲೀಪರ್ ಸೆಲ್ ಪೂರೈಸುವ ಬಿಡಿ ವಸ್ತುಗಳಿಂದ ಬಾಂಬ್ ತಯಾರಿಕೆ ಮಾಡಲಾಗಿದೆ.
ಇನ್ನು ಈ ಬಾಂಬ್ ಸ್ಫೋಟ ಮಾಡಿದ್ದು ಹೇಗೆ ಅನ್ನೋದನ್ನ ಕಂಡು ಹಿಡಿಯಲು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.