Categories: ರಾಮನಗರ

ರಾಮನಗರ: ಬಿಜೆಪಿ ನಾಯಕರ ವಿಕೃತ ಮನಸ್ಥಿತಿ ತೋರಿಸುತ್ತಿದೆ – ಡಿ.ಕೆ.ಸುರೇಶ್

ರಾಮನಗರ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಿಂದ ಜಲಪ್ರಳಯ ಉಂಟಾಗಿದ್ದು ಜನರು ಸಾವು ನೋವಿನಿಂದ ನರಳುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಜನಸ್ಪಂದನದ ಹೆಸರಿನಲ್ಲಿ ವೇದಿಕೆ ಮೇಲೆ ನೃತ್ಯಮಾಡಿ ಸಂಭ್ರಮಿಸುತ್ತಿರುವುದು ಅವರ ವಿಕೃತಿ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.

ಹರೀಸಂದ್ರ ಗ್ರಾಮದಲ್ಲಿ ಮಳೆಯಿಂದ ಹಾನಿಗೊಂಡಿರುವ ಸೇತುವೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಬಂದು ಸಾಕಷ್ಟು ಅನಾಹುತವಾಗಿದೆ.

ಮನೆ, ಜಮೀನುಗಳು ಮುಳುಗಿ ಹಲವೆಡೆ ಹಾನಿ ಸಂಭವಿಸಿದೆ. ಜನರು ನೆರೆಯಿಂದ ನರಳುತ್ತಿದ್ದು ಬದುಕಲು ಮತ್ತು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾಳೆ ಏನಾಗುವುದೋ ಎಂಬ ಚಿಂತೆಯಲ್ಲಿ ದಿನ ಕಳೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ನೃತ್ಯಮಾಡಿ ಸಂತೋಷ ಪಡುವುದು ವಿಕೃತಿ ಅಲ್ಲದೆ ಮತ್ತೇನು? ಇದನ್ನು ರಾಜ್ಯದ ಜನರು ಗಮನಿಸಬೇಕು ಎಂದರು.

ಜನರು ನೋವಿನಲ್ಲಿರುವಾಗ ಮಾಡಿರುವ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಆ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥರು ವಿಶ್ಲೇಷಣೆ ಮಾಡಬೇಕು. ಅವರ ಸರಕಾರದ ಯೋಗ್ಯತೆಯನ್ನು ತೋರಿಸಿದ್ದಾರೆ. ಇಂತಹವರು ಅಧಿಕಾರದಲ್ಲಿರುವ ಬದಲು ರಾಜಿನಾಮೆ ಕೊಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿಯಿಂದ ರಾಮನಗರದಲ್ಲಿ ಪ್ರವಾಹ ಉಂಟಾಯಿತು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಮೈಸೂರು ಸಂಸದರು ದಯವಿಟ್ಟು ಮೈಸೂರು ಕೊಡಗಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಲಿ. ಅನಾವಶ್ಯಕವಾಗಿ ಎಲ್ಲಾ ನನ್ನದೇ ಎಂದು ಹೇಳಿಕೊಂಡು ಪೋಸ್ ಕೊಡೋದು ಬೇಡ ಎಂದು ತಿರುಗೇಟು ನೀಡಿದರು.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ವಿಚಾರದಲ್ಲಿ ನಿಮ್ಮದೇನಾದರು ಇದ್ದರೆ ಬನ್ನಿ, ನಾನೂ ಬರುತ್ತೇನೆ. ಎಲ್ಲಾ ವಿಚಾರಗಳನ್ನು ಜನರ ಮುಂದೆ ಇಡೋಣ. ಜನ ಕೇಳಿದ್ದಕ್ಕೆ ನಾವು, ನೀವು ಉತ್ತರ ಹೇಳೋಣ ಎಂದು ಸವಾಲು ಹಾಕಿದರು.

Sneha Gowda

Recent Posts

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

4 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

29 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

42 mins ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

1 hour ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

1 hour ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

2 hours ago