News Karnataka Kannada
Monday, April 22 2024
Cricket
ರಾಮನಗರ

ಕೆಐಎಡಿಬಿ ಭೂ ಸ್ವಾಧೀನಕ್ಕೊಳಗಾದ ಜಮೀನು ಪರಿಶೀಲನೆ

KIADB inspects land acquired land
Photo Credit : By Author

ರಾಮನಗರ: ನೈಸ್ ರಸ್ತೆ ನಿರ್ಮಾಣಕ್ಕಾಗಿ ಬಿಡದಿ ಹೋಬಳಿ ತಾಳಕುಪ್ಪೆ ಗ್ರಾಮದ ಬಳಿ ಕೆಐಎಡಿಬಿ ಭೂಸ್ವಾಧೀನಕ್ಕೆ ಒಳಗಾಗಿರುವ ಜಮೀನನ್ನು ಶಾಸಕರು ಹಾಗೂ ಸದನ ಸಮಿತಿ ಮಾಜಿ ಅಧ್ಯಕ್ಷ ಟಿ.ಬಿ.ಜಯಚಂದ್ರ ಅವರು ಸ್ಥಳ ಪರಿಶೀಲಿಸಿ ಭೂ ಮಾಲೀಕರ ಬಳಿ ಸಮಾಲೋಚನೆ ನಡೆಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ(ನೈಸ್ ರಸ್ತೆ) ನಿರ್ಮಾಣದ ಉದ್ದೇಶದಿಂದ ಭೂಸ್ವಾಧೀನಪಡಿಸಿಕೊಂಡಿರುವ ಭೂಮಾಲೀಕರಿಗೆ 2023ರ ಮೇ ತಿಂಗಳಲ್ಲಿ ಹಿಂಬರಹದ ನೋಟೀಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸದನ ಸನಿತಿ ಮಾಜಿ ಅಧ್ಯಕ್ಷರಾಗಿದ್ದ ಟಿ.ಬಿ.ಜಯಚಂದ್ರ ಅವರು ಭೂಸ್ವಾಧೀನಕ್ಕೆ ಒಳಗಾದ ತಾಳಕುಪ್ಪೆ ಸರ್ವೆ ನಂಬರ್ 58/3ರ ಭೂಪ್ರದೇಶವನ್ನು ವೀಕ್ಷಣೆ ಮಾಡಿ ಭೂಮಾಲೀಕರ ಜೊತೆಗೆ ಚರ್ಚಿಸಿ ಮಾಹಿತಿ ಕಲೆ ಹಾಕಿದರು.

2008 ರಲ್ಲಿ ನೈಸ್ ರಸ್ತೆ(ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ) ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಅಧಿಸೂಚನೆ ಹೊರೆಡಿಸಿತ್ತು. ಈ ವೇಳೆ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ತಾಳಕುಪ್ಪೆ ಸರ್ವೆ ನಂಬರ್ 58/3 ರಲ್ಲಿ 2 ಎಕರೆ 27 ಗುಂಟೆ ಜಮೀನು ಭೂಸ್ವಾಧೀನಕ್ಕೆ ಒಳಪಟ್ಟಿತ್ತು. ಸದರಿ ಜಮೀನಿಗೆ ಕೆಐಎಡಿಬಿ ನಿಗದಿ ಮಾಡಿದ್ದ ದರ ತೀರಾ ಕಡಿಮೆಯಾಗಿದೆ ಎಂದು ಭೂಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು.

ನಂತರ 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಅವಧಿಯಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಭೂಸ್ವಾಧೀನ ವಿಷಯ ಚರ್ಚೆಗೆ ಬಂದಾಗ ಅಂದಿನ ಸದನ ಸಮಿತಿ ಅಧ್ಯಕ್ಷರಾಗಿದ್ದ ಟಿ.ಬಿ.ಜಯಚಂದ್ರ ಅವರು ನೈಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನವಾಗಿರುವ ಜಮೀನುಗಳಿಗೆ ಕೆಐಎಡಿಬಿ ನಿಗದಿ ಮಾಡಿರುವ ಪರಿಹಾರ ದರಕ್ಕೂ ಪ್ರಸ್ತುತ ಮಾರುಕಟ್ಟೆ ದರಕ್ಕೂ ಭಾರಿ ವ್ಯತ್ಯಾಸ ಇರುವುದರಿಂದ ಭೂಮಾಲೀಕರಿಗೆ ಅನ್ಯಾಯವಾಗಲಿದೆ. ಹೀಗಾಗಿ ಪರಿಹಾರವನ್ನು ಹೆಚ್ಚಿಸಬೇಕು ಇಲ್ಲವೇ ಸದರಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಸರಕಾರಕ್ಕೆ ವರದಿ ನೀಡಿದ್ದರು.

ಆದರೆ 2023ರ ಮೇ 30 ರಂದು ಕೆಐಎಡಿಬಿ(ಬಿಎಂಐಸಿಪಿ) ವಿಶೇಷ ಭೂಸ್ವಾಧೀನಾಧಿಕಾರಿಗಳು ನೈಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಒಳಪಟ್ಟ ಜಮೀನಿನ ಮಾಲೀಕರಿಗೆ ಹಿಂಬರಹದ ನೋಟೀಸ್ ಜಾರಿ ಮಾಡಿರುತ್ತಾರೆ. ತಾಳಕುಪ್ಪೆ ಗ್ರಾಮದ ಸರ್ವೆ ನಂಬರ್ 58/3 ರಲ್ಲಿ ಒಟ್ಟು 2.27 ಎಕರೆ ಜಮೀನಿಗೆ ಭೂಸ್ವಾಧೀನ ಕಾಯ್ದೆ 1894ರಂತೆ ಐತೀರ್ಪು ರಚಿಸಲಾಗಿದ್ದು ಸದರಿ ತೀರ್ಪನ್ನು ಅನುಮೋದಿಸಲಾಗಿದೆ. ಹೀಗಾಗಿ 45.44 ಲಕ್ಷ ರೂಗಳನ್ನು ರಾಮನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದೆ ಎಂದು ಹಿಂಬರಹದಲ್ಲಿ ತಿಳಿಸಿದ್ದಾರೆ.

ಇದರಿಂದ ಭೂಮಾಲೀಕರು ಮತ್ತೇ ಕಂಗಾಲಾಗಿದ್ದರು. ಈ ವಿಷಯವನ್ನು ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ಮಾಜಿ ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಅವರು ಸದನ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಟಿ.ಬಿ.ಜಯಚಂದ್ರ ಅವರ ಗಮನ ಸೆಳೆದಿದ್ದರು. ಹೀಗಾಗಿ ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಚರ್ಚಿಸಲು ಅರ್ಜಿ ಸಲ್ಲಿಸಿದ್ದು ವಾಸ್ತವ ಸ್ಥಿತಿ-ಗತಿಗಳನ್ನು ತಿಳಿದುಕೊಳ್ಳಲು ಜಯಚಂದ್ರ ಅವರು ಭೂಮಾಲೀಕರನ್ನು ಭೇಟಿ ಮಾಡಿ ಚರ್ಚಿಸಿದರು.

ಈ ಸಂಧರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಜಿ.ಎನ್.ನಟರಾಜು, ಜಿಪಂ ಮಾಜಿ ಸದಸ್ಯ ಸಿ.ಹೆಚ್.ಪುಟ್ಟಯ್ಯ, ಜಮೀನಿನ ಮಾಲೀಕರಾದ ಮದ್ದೂರಮ್ಮ ಹೊಸಳ್ಳಿಯಪ್ಪ ಕುಟುಂಬದ ಸದಸ್ಯರು ಸೇರಿದಂತೆ ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು