Categories: ರಾಮನಗರ

ಬಿಡದಿಯ ವಂಡರ್ ಲಾದಲ್ಲಿ ನೂಕುನುಗ್ಗಲು

ರಾಮನಗರ: ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಬಿಡದಿಯ ವಂಡರ್ ಲಾ  ಮಹಿಳೆಯರಿಗೆ ಒನ್ ಪ್ಲಸ್ ಒನ್ ಆಫರ್ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಅಮ್ಯೂಸ್‌ಮೆಂಟ್ ಪಾರ್ಕ್ ಮುಂಭಾಗ ಭಾರಿ ನೂಕು ನುಗ್ಗಲು ಉಂಟಾಯಿತು.

ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್. 8 ರಂದು ವಂಡರ್ ಲಾ ದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವನ್ನು ಕಲ್ಪಿಸಲಾಗಿತ್ತು. ಒಂದು ಟಿಕೆಟ್ ಖರೀಧಿಸಿದರೆ ಮತ್ತೊಬ್ಬರಿಗೆ ಪ್ರವೇಶ ಉಚಿತ ಎಂಬ ಆಫರ್ ನೀಡಿದ್ದರಿಂದ ಮಂಗಳವಾರ ಮುಂಜಾನೆಯಿಂದಲೇ ಮಹಿಳೆಯರು ಮತ್ತು ಯುವತಿಯರು ವಂಡರ್ ಲಾ ಮನರಂಜನಾ ಪಾರ್ಕ್‌ನ ಮುಖ್ಯ ಪ್ರವೇಶದ್ವಾರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಿರೀಕ್ಷೆಗೂ ಮೀರಿ ಅಧಿಕ ಪ್ರಮಾಣದಲ್ಲಿ ಮಹಿಳೆಯರು ಆಗಮಿಸಿದ ಪರಿಣಾಮ ವಂಡರ್ ಲಾ ಸಿಬ್ಬಂದಿಗಳು ಹಾಗೂ ಪೊಲೀಸರು ಸಮರ್ಪಕ ನಿರ್ವಹಣೆಗಾಗಿ ಹರಸಾಹಸ ಪಡಬೇಕಾಯಿತು.

ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್‌ನಲ್ಲಿ ಸುಮಾರು 8ಸಾವಿರ ಮಂದಿಗೆ ಪ್ರವೇಶ ಕಲ್ಪಿಸಬಹುದಾಗಿದ್ದು ರೈಡ್‌ಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆಗೆ ಸಾಧ್ಯವಾಗುವಷ್ಟು ಸಿಬ್ಬಂದಿಗಳ ಸಾಮರ್ಥ್ಯವಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸಿದರೆ ನಿರ್ವಹಣೆ ಮಾಡುವುದು ಸಿಬ್ಬಂದಿಗಳಿಗೆ ಕಷ್ಟಸಾಧ್ಯ. ಆದರೆ ಮಹಿಳಾ ದಿನಾಚರಣೆ ಅಂಗವಾಗಿ ವಂಡರ್ ಲಾ ವಿಶೇಷ ಪ್ಯಾಕೆಜ್ ಘೋಷಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ಹಾಗೂ ಯುವತಿಯರು ಭಾರಿ ಪ್ರಮಾಣದಲ್ಲಿ ಮುಗಿಬಿದ್ದಿದ್ದರು.

ಮನರಂಜನಾ ಪಾರ್ಕ್ ಪ್ರವೇಶದ ಜತೆಗೆ ವಂಡರ್ ಲಾ ರೆಸಾರ್ಟ್‌ನಲ್ಲಿಯೂ ಸಹ ಮಹಿಳೆಯರಿಗೆ ಆಕರ್ಷಕ ಆಫರ್ ನೀಡಿ ರೂಮ್ ಬುಕ್ಕಿಂಗ್ ಮೇಲೆ ಒನ್ ಪ್ಲಸ್ ಒನ್ ಆಫರ್ ಕೊಡಲಾಗಿತ್ತು. ಎರಡೂ ಕಡೆ ಬುಕ್ಕಿಂಗ್ ಮಾಡುವವರಿಗೂ ವಿಶೇಷ ಪ್ಯಾಕೆಜ್ ಒದಗಿಸಿ ಈ ಮೂಲಕ ವಂಡರ್ ಲಾ ಮಹಿಳೆಯರ ದಿನವನ್ನು ವಿಭಿನ್ನವಾಗಿ ಹಾಗೂ ಸಂಪೂರ್ಣ ಮನರಂಜನೆ ನೀಡಲು ಮುಂದಾಗಿತ್ತು. ಹೀಗಾಗಿ ಸುಮಾರು ೧೫೦೦ ರಷ್ಟು ಮಹಿಳೆಯರು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಸುಮಾರು ೧೦ ಸಾವಿರ ಸಂಖ್ಯೆಯಷ್ಟು ನೇರವಾಗಿ ಟಿಕೆಟ್ ಕೌಂಟರ್‌ಗಳ ಬಳಿ ಸೇರಿದ್ದರು.

ನಿರೀಕ್ಷೆಗೂ ಮೀರಿ ಸುಮಾರು 12 ರಿಂದ 13 ಸಾವಿರ ಮಹಿಳೆಯರು ವಂಡರ್ ಲಾಗೆ ದೌಡಾಯಿಸಿದ್ದರಿಂದ 8 ರಿಂದ 10ಸಾವಿರ ಜನರಿಗೆ ಮಾತ್ರ ಪ್ರವೇಶ ಕಲ್ಪಿಸಿ ಉಳಿದವರನ್ನು ವಾಪಸ್ ಕಳುಹಿಸಲಾಯಿತು

Sneha Gowda

Recent Posts

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

10 mins ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

1 hour ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

2 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

2 hours ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

3 hours ago

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

3 hours ago