News Karnataka Kannada
Sunday, April 21 2024
Cricket
ರಾಮನಗರ

ರಾಮನಗರ : ನಕಲಿ ದಾಖಲಿ ಸೃಷ್ಟಿಸಿ ದೋಖಾ

Inauguration of administrative office of Federation of Bunts Associations at Mulki on April 5
Photo Credit :

ರಾಮನಗರ: ಫೈನಾನ್ಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮಾಯಕರ ಹೆಸರಿನಲ್ಲಿ ಸಾಲ ಪಡೆದು ಸುಮಾರು 11 ಲಕ್ಷಕ್ಕೂ ಹೆಚ್ಚು ಮೊತ್ತದ ಹಣ ಲಪಟಾಯಿಸಿರುವ ಘಟನೆ ಬಿಡದಿ ಪಟ್ಟಣದಲ್ಲಿ ನಡೆದಿದೆ.

ಬಿಡದಿಯ ಕೇತಗಾನಹಳ್ಳಿಯಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವ್ಯವಹಾರಿಕಾ ಪ್ರತಿನಿಧಿಯಾಗಿರುವ ಬಿ.ಎಸ್.ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಉದ್ಯೋಗಿಗಳಾಗಿದ್ದ ಅರ್ಜುನ್.ಆರ್.ಎಚ್ ಮತ್ತು ಪವನ್‌ಕುಮಾರ್ ಟಿ.ಸಿ ಎಂಬುವರು ಅಕ್ರಮವಾಗಿ ಕಂಪೆನಿಯ ಹಣ ಲಪಟಾಯಿಸಿದ ಆರೋಪಿಗಳು. ಸಂಸ್ಥೆಯ ವ್ಯವಸ್ಥಾಪಕ ಪುನೀತ್.ಎಂ ಅವರು ನೀಡಿರುವ ದೂರಿನ ಮೇರೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿ.ಎಸ್.ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆ ನೀಡುವ ಸಣ್ಣ ಸಾಲ ಯೋಜನೆಯಡಿ ಸದಸ್ಯರ ಹೆಸರಿನಲ್ಲಿ ನಕಲಿ ಸಹಿ ಮತ್ತು ದಾಖಲೆಗಳನ್ನು ತಯಾರಿಸಿ ಸಾಲ ಸೌಲಭ್ಯಗಳನ್ನು ಪಡೆಯಲಾಗಿದೆ. ಆದರೆ ಫಲಾನುಭವಿಗಳಿಗೆ ತಲುಪಬೇಕಾಗಿದ್ದ  ಸುಮಾರು 11 ಲಕ್ಷದ ಒಂದು ಸಾವಿರ ರೂ ಹಣವನ್ನು ಸಂಸ್ಥೆಯ ಉದ್ಯೋಗಿಗಳಾದ ಅರ್ಜುನ್.ಆರ್.ಎಚ್. ಮತ್ತು ಪವನ್‌ಕುಮಾರ್ ಅವರುಗಳು ತಮ್ಮ ಸ್ನೇಹಿತರು ಹಾಗೂ ಪರಿಚಯಸ್ಥರ ಖಾತೆಗಳಿಗೆ ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿದ್ದಾರೆ.

ಸಂಸ್ಥೆಯ ಕಂಪ್ಯೂಟರ್‌ನಲ್ಲಿದ್ದ ಯೋಜನಾ ಸದಸ್ಯರ ಮಾಹಿತಿಗಳನ್ನು ಬಳಸಿ ಸುಮಾರು 25 ಸದಸ್ಯರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಂಸ್ಥೆಯಿಂದ ಸಾಲ ವಿತರಣೆ ಮಾಡಿರುವಂತೆ ದಾಖಲೆಗಳನ್ನು ತಯಾರಿಸಲಾಗಿದೆ. ಪ್ರತಿ ಫಲಾನುಭವಿಗೆ 50 ಸಾವಿರ ರೂಗಳವರೆಗೆ ಸಾಲ ಸೌಲಭ್ಯ ನೀಡಿರುವಂತೆ ದಾಖಲೆ ಸೃಜಿಸಲಾಗಿದ್ದು ಅಂದಾಜು 11 ಲಕ್ಷಕ್ಕೂ ಹೆಚ್ಚು ಹಣವನ್ನು ಲಪಟಾಯಿಸಲಾಗಿದೆ. ಈ ಕುರಿತು ಸಂಸ್ಥೆ ನಡೆಸಿದ ಕ್ಷೇತ್ರ ಕಾರ್ಯಾಚರಣೆ ತನಿಖೆಯಲ್ಲಿ ಭಾರಿ ವಂಚನೆಯಾಗಿರುವುದು  ಬಯಲಾಗಿದೆ.

ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು ಅವರ ಸೂಚನೆ ಮೇರೆಗೆ ವ್ಯವಸ್ಥಾಪಕ ಪುನೀತ್ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳ ಬೆನ್ನತ್ತಿದ ಪೊಲೀಸರು ಕೊಳ್ಳೆಗಾಲ ತಾಲ್ಲೂಕಿನ ಶಂಕನಪುರ ಗ್ರಾಮದ ವಾಸಿ ಅರ್ಜುನ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಸಹೊದ್ಯೋಗಿ ಪವನ್‌ಕುಮಾರ್ ಜತೆ ಸೇರಿ ಕೈಚಳಕ ತೋರಿದ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು