News Karnataka Kannada
Tuesday, April 16 2024
Cricket
ರಾಮನಗರ

ರಾಮನಗರದಲ್ಲಿ ಹಿಂದಿ ಭಾಷೆ ಹೇರಿಕೆ ಖಂಡಿಸಿ ಪ್ರತಿಭಟನೆ

Janaparavedike
Photo Credit :

ರಾಮನಗರ: ರಾಜ್ಯದ ಮೇಲೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆಯನ್ನು ಖಂಡಿಸಿ ನಗರದ ಐಜೂರು ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಸಂಘಟನೆಯ ರಾಜ್ಯಾಧ್ಯP ಎಲ್.ರಮೇಶಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹಿಂದಿ ಭಾಷಿಕವಲ್ಲದ ರಾಜ್ಯಗಳು ಸಂಪರ್ಕ ಭಾಷೆಯನ್ನಾಗಿ ಇಂಗ್ಲೀಷನ್ನು ಬಳಸಲು ಅವಕಾಶ ನೀಡಬೇಕು. ಅದಕ್ಕೆ ಚ್ಯುತಿ ತರುವ ನಡೆಯೂ ಸಮ್ಮತವಲ್ಲ. ಹಿಂದಿ, ಕನ್ನಡ, ತಮಿಳು, ತೆಲುಗಿನಂತೆಯೇ ಇಂಗ್ಲೀಷನ್ನು ಕೂಡ ಭಾರತೀಯ ಭಾಷೆಯನ್ನಾಗಿ ಅಂಗೀಕರಿಸಿzವೆ ಎಂಬುದನ್ನು ಕೇಂದ್ರ ಸರ್ಕಾರ ಮರೆಯಬಾರದು. ಒಂದು ನಿರ್ದಿಷ್ಟ ಸಿzಂತ ಮತ್ತು ಪ್ರಭುತ್ವದ ರಾಜಕೀಯ ದುರ್ಬಳಕೆಗೆ ತುತ್ತಾಗುವ ಭಾಷೆ ತೀವ್ರ ಹಾನಿಯನ್ನು ಅನುಭವಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಎಲ್ಲಾ ಭಾಷೆಗಳನ್ನು ಗೌರವಿಸಬೇಕು ಆದರೆ ಒಂದು ಭಾಷೆಯ ಹೇರಿಕೆ ಸಲ್ಲದು ಇಂಗ್ಲಿಷ್ ಸೇರಿದಂತೆ ಎಲ್ಲ ಭಾಷೆ ಜ್ಞಾನ ಇರಬೇಕು. ಆದರೆ ಕಲಿಯಲೇಬೇಕು ಎಂಬ ಒತ್ತಡ ಸರಿಯಲ್ಲ ಮಾತೃಭಾಷೆ, ಪ್ರಾದೇಶಿಕ ಭಾಷೆಗಳ ಬದಲಿಗೆ ಇಂತಹz ಭಾಷೆ ಬಳಸಬೇಕು ಎನ್ನುವುದು ನಿರಂಕುಶವಾದಿಗಳು ಜನರ ಮೇಲೆ ಎಸೆಗುವ ದೌರ್ಜನ್ಯ ಇಂತಹ ಒತ್ತಡಗಳಿಗೆ ಕನ್ನಡಿಗರು ಮಣಿಯುವುದಿಲ್ಲ ಎಂದು ಕಿಡಿಕಾರಿದರು.

ಕನ್ನಡದ ಸರ್ಕಾರವನ್ನು ಮೀರಿಸಿ, ಕನ್ನಡದ ನಾಯಕತ್ವವನ್ನು ಹಾಳು ಮಾಡಿ, ಕನ್ನಡಿಗರ ಮೇಲೆ ಸಾರ್ವಭೌಮತ್ವ ಸಾಧಿಸಲು ಹೊರಟಿರುವ ಕೇಂದ್ರ ಸರ್ಕಾರ ನಿಲುವು ಖಂಡನೀಯ. ಹಿಂದೀ ಹೇರಿಕೆಯನ್ನು ಆಗಲೇಬಾರದು. ರಾಜ್ಯದಲ್ಲಿ ಇರುವ ಕನ್ನಡ ಶಾಲೆಗಳನ್ನು ಉಳಿಸುವಂತಹ ಕೆಲಸ ಮಾಡಬೇಕು. ಗಡಿಯನ್ನು ಅಭಿವೃದ್ಧಿ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳು ಈಡೇರಿಸುವವರೆಗೂ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸಂಘಟನೆಯ ಜಿಧ್ಯP ಯೋಗೀಶ್‌ಗೌಡ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಕೇಂದ್ರದ ನೀತಿಗೆ ಶರಣಾಗಿವೆ. ಇದರಿಂದ ಕನ್ನಡ ಭಾಷೆಗೆ ಮತ್ತಷ್ಟು ಅಪಾಯ ಎದುರಾಗಲಿದೆ. ಕೂಡಲೆ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳಾದ ಬೆಂಕಿ ಶ್ರೀಧರ್, ರಂಜಿತ್ ಗೌಡ, ವಿ.ಸಿ.ಉಮಾಶಂಕರ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಗಳಮ್ಮ, ಮಲ್ಲು,  ರಾಯಚೂರು ವೀರೇಶ್, ಕೋಲಾರ ವೆಂಕಟೇಶ್, ಭೂವಳ್ಳಿ ನಿಂಗೇಗೌಡ, ಮಹೇಶ್, ಹನಿಯೂರು ಉಮಾಶಂಕರ್, ಚಕ್ಕೆರೆ ರಾಮೇಗೌಡ, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ರಾಮಚಂದ್ರ, ಸುರೇಶ್ ಬಾಬು, ಅಜಯ, ಪ್ರಿಯಕೃಷ್ಣ, ಮಂಗಳವಾರಪೇಟೆ ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು