News Karnataka Kannada
Saturday, April 20 2024
Cricket
ರಾಮನಗರ

ರಾಮನಗರದಲ್ಲಿ ಟೊಮ್ಯಾಟೋ ರಸ್ತೆಗೆ ಎಸೆದ ರೈತ

Tomato
Photo Credit :

ರಾಮನಗರ: ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿರುವ ಸನ್ನಿವೇಶದಲ್ಲಿ ಬೆಲೆ ಕುಸಿತದಿಂದ ಬೇಸತ್ತ ರೈತನೋರ್ವ  ಟೊಮ್ಯಾಟೊವನ್ನು ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ ಸುರಿದು ಹೋಗಿರುವ ಪ್ರಸಂಗ ನಡೆದಿದೆ.

ತೈಲ ಬೆಲೆ, ಅಡುಗೆ ಎಣ್ಣೆ ಹಾಗೂ ದಿನಸಿ ಕಾಳುಗಳ ಬೆಲೆಗಳು ದಿನೇ ದಿನೇ ಏರುಗತಿಯಲ್ಲಿವೆ. ಅಂತೆಯೇ ಸೊಪ್ಪು ತರಕಾರಿಗಳ  ಬೆಲೆಗಳು ಕೈಗೆಟುಕುವ ದರದಲ್ಲಿಯೇ ಉಳಿದಿವೆ. ಕಳೆದ ಮೂರ್‍ ನಾಲ್ಕು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಏರಿಕೆ ಕಂಡಿದ್ದ ಟೊಮ್ಯೋಟೊ ಸಗಟು ದರವೇ ಪ್ರತಿ ಕೆ.ಜಿ ಗೆ 100 ರೂಪಾಯಿ ದಾಟಿತ್ತು. ಬೆಲೆ ಏರಿಕೆಯಿಂದ ಮುಟ್ಟುವ ಮೊದಲೇ ಗ್ರಾಹಕರಿಗೆ ಭಯ ಹುಟ್ಟಿಸಿದ್ದ ಟೊಮ್ಯಾಟೊ ಬೆಳೆಗಾರರಲ್ಲಿ ಹರ್ಷ ಮೂಡಿಸಿತ್ತು. ಆದರೆ ಈಗ ಬೆಲೆ ಕುಸಿತದಿಂದ ಕಸದ ತಿಪ್ಪೆಗೆ ಎಸೆಯುವಂತಾಗಿದೆ.

ತರಕಾರಿ ಬೆಳೆಗಳಿಗೆ ನೇರ ಮಾರುಕಟ್ಟೆ, ಬೆಂಬಲ ಬೆಲೆ, ಸಂಸ್ಕರಣಾ ಘಟಕ ಲಭ್ಯವಿಲ್ಲದ ಕಾರಣ ಹಾಗೂ ಕೃಷಿ ವಲಯದಲ್ಲಿ  ಉಂಟಾಗುತ್ತಿರುವ ನಷ್ಟಗಳಿಂದ ರೈತ ಬೇಸಾಯದಿಂದಲೇ ವಿಮುಕನಾಗುವ ಸನ್ನಿವೇಶ ಎದುರಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಸಾಗಾಣಿಕೆ ವೆಚ್ಚ ಸೇರಿದಂತೆ ಕೃಷಿ ಸಂಬಂಧಿತ ಖರ್ಚುಗಳು ಹಾಗೂ ಕೂಲಿ ಕಾರ್ಮಿಕರ ಕೊರತೆ ಮುಂತಾದ ಸಮಸ್ಯೆಗಳ ನಡುವೆ ಹಾಕಿದ ಬಂಡವಾಳವೂ ವಾಪಸ್ ಸಿಗದಂತಾಗಿರುವುದು ರೈತಾಪಿ ಕುಟುಂಬಗಳನ್ನು ಕಂಗಾಲಾಗಿಸಿದೆ.

ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕಾಗಿ ವರ್ಷವಿಡಿ ಅಲೆಯುವ ತರಕಾರಿ ಬೆಳೆಗಾರರು ನೇರ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ,  ಮದ್ಯವರ್ತಿಗಳ ಹಾವಳಿಯಿಂದ ಸೂಕ್ತ ಬೆಲೆ ಸಿಗದೆ ಒಂದಲ್ಲಾ ಒಂದು ಕಿರಿಕಿರಿ ಅನುಭವಿಸುವುದುಂಟು. ತರಕಾರಿ ಹಣ್ಣುಗಳನ್ನು ಕಡಿಮೆ ಬೆಲೆಗೆ ಕೊಂಡು ಸಿಕ್ಕಷ್ಟು ಲಾಭ ಮಾಡಿಕೊಳ್ಳುವ ಸಣ್ಣ ವ್ಯಾಪಾರಿಗಳಿಂದಲೂ ರೈತರು ಚೌಕಾಸಿಗೆ ಒಳಗಾಗುವುದು ಸಹಜ. ಹೀಗಾಗಿ ಕಷ್ಟಪಟ್ಟು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗದಿದ್ದಾಗ ಬೆಳೆಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುವುದು ಇಲ್ಲವೇ ಜಾನುವಾರುಗಳ ಮೇವಿಗೆ ಬಳಸುವುದು ಸಾಮಾನ್ಯವಾಗಿದೆ.

ಬೆಲೆ ಕುಸಿತದಿಂದ ರೀಟೆಲ್ ವ್ಯಾಪಾರದಲ್ಲಿ ಒಂದು ಕೆ.ಜಿ.ಗುಣಮಟ್ಟದ ಟೊಮ್ಯಾಟೊ 8 ರಿಂದ 10 ರೂಗೆ ಮಾರಾಟವಾಗಿದೆ.  ಆದರೆ ಕಷ್ಟಪಟ್ಟು ಬೆಳೆದ ರೈತರಿಗೆ ಒಂದು ಕೆ.ಜಿಗೆ ಸಿಗುವ ಅಸಲಿ ಬೆಲೆ ಕೇವಲ 2 ರಿಂದ 3 ರೂಪಾಯಿ ಮಾತ್ರ. ಒಂದು ಕ್ರೇಟ್‌ಗೆ 250 ರಿಂದ 300 ರೂಗಳಿಗೆ ಬಿಕರಿಯಾದಾಗ ಮಾತ್ರ ರೈತರು ಸ್ವಲ್ಪಮಟ್ಟಿನ ಲಾಭ ಕಾಣಲು ಸಾಧ್ಯ. ನಗರದ ಮಾರುಕಟ್ಟೆಯಲ್ಲಿ ಈಗ ಉತ್ತಮ ಗುಣಮಟ್ಟದ ಟೊಮ್ಯಾಟೊ 100 ರಿಂದ 150 ರೂಗಳಿಗೆ ಒಂದು ಕ್ರೇಟ್ ಲಭ್ಯವಾಗುತ್ತಿದೆ. ದಿನೇ ದಿನೇ ಧರದಲ್ಲಿ ಕುಸಿತ ಕಾಣುವ ಮೂಲಕ ಬೆಳೆಗಾರರ ಒಡಲನ್ನು ಹಿಂಡುತ್ತಿದೆ.

ದಿನ ನಿತ್ಯದ ಆಹಾರ ಬಳಕೆಗೆ ಅಗತ್ಯವಾಗಿರುವ ಟೊಮ್ಯಾಟೊ ಈಗ ಅಗ್ಗವಾಗಿದ್ದರೂ ಸಹ ಸಣ್ಣ ವ್ಯಾಪಾರಿಗಳು ಮಾತ್ರ ಬೆಲೆಯಲ್ಲಿ ಚೌಕಾಸಿ ಮಾಡುವುದನ್ನು ಬಿಟ್ಟಿಲ್ಲ. ಕಳೆದೆರಡು ವರ್ಷಗಳು ಕೋವಿಡ್ ಹೊಡೆತದಿಂದ ಮಕಾಡೆ ಮಲಗಿದ್ದ ಪೇಟೆ ಬೀದಿ  ವ್ಯಾಪಾರ ಇದೀಗ ಚೇತರಿಕೆ ಕಂಡಿದೆ. ಆದರೆ  ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳು ಇನ್ನೂ ಟೇಕಾಫ್ ಆಗದಿರುವ ಹಿನ್ನೆಲೆಯಲ್ಲಿ ನಿರುದ್ಯೋಗದಿಂದ ಸಂಕಷ್ಟಕ್ಕೆ ಜನ ಸಾಮಾನ್ಯರ ಆರ್ಥಿಕ ಸ್ಥಿತಿಯೂ ಡೋಲಾಯಮಾನ ಆಗಿದೆ.

ಟೊಮ್ಯಾಟೊ ಧರ ಬೇಸಿಗೆಯಲ್ಲಿ ಕುಸಿಯುವುದು ಮಳೆಗಾಲದಲ್ಲಿ ಏರಿಕೆ ಕಾಣುವುದು ಸಹಜ. ಆದರೆ ಮದುವೆ ಸೀಜನ್ ನಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯೋಟೊ ಬೆಳೆ ಬರುತ್ತಿರುವ ಕಾರಣ  ರೈತರಿಗೆ ಹಾಕಿದ ಬಂಡವಾಳ ಗಿಟ್ಟದಂತಾಗಿದೆ. ಒಂದೆರಡು ತಿಂಗಳ ಹಿಂದೆಯಷ್ಟೇ ಟೊಮ್ಯಾಟೊಗೆ ಉತ್ತಮ ಬೆಳೆಯಿತ್ತು. ಆದರೆ ಇದೀಗ ಬೆಲೆ ಕುಸಿತದಿಂದ ರೈತರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದ ಬೇಸತ್ತ ರೈತರು ಶ್ರಮವಹಿಸಿ ಬೆಳೆದ ಟನ್‌ಗಟ್ಟಲೆ ಟೊಮ್ಯಾಟೊವನ್ನು ರಸ್ತೆ ಬದಿ ಹಾಗೂ ಹಳ್ಳಕೊಳ್ಳಗಳಲ್ಲಿ ಸುರಿದು ಹೋಗುತ್ತಿರುವುದು ಕಂಡುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು