News Karnataka Kannada
Friday, April 12 2024
Cricket
ರಾಮನಗರ

ಬಿಜೆಪಿ ಬಂದ ನಂತರ ಕೊಲೆಗಳು ಹೆಚ್ಚಾಗಿವೆ; ಎಚ್ ಡಿ ಕುಮಾರಸ್ವಾಮಿ

BJP is looting people's money in the name of development: HDK
Photo Credit :

ರಾಮನಗರ : ಬಿಜೆಪಿ ಬಂದ ನಂತರ ಕೊಲೆಗಳು ಹೆಚ್ಚಾಗಿವೆ. ತಲೆ ಒಡೆಯುವ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಕೇತಗಾನಹಳ್ಳಿಯ ತೋಟದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ತಲೆ ಒಡೆಯುತ್ತಿರಿ, ನಾವು ಕನಿಕರ ವ್ಯಕ್ತ ಪಡಿಸುತ್ತಲೇ ಇರುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಜಮೀರ್ ಅಹಮದ್, ಚಲುವರಾಯ ಸ್ವಾಮಿ, ಬಾಲಕೃಷ್ಣ ಮತ್ತೆ ಜೆಡಿಎಸ್ ಪಕ್ಷಕ್ಕೆ ವಾಪಸ್ ಬಂದರೆ ಕರೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರ ಪಕ್ಷದ ಮುಂದೆ ಇಲ್ಲ. ಕೆಲವರನ್ನು ಪಕ್ಷಕ್ಕೆ ವಾಪಸ್ಸು ಕರೆದುಕೊಳ್ಳದಂತೆ ಪಕ್ಷದ ಕಾರ್ಯಕರ್ತರೇ ಒತ್ತಡ ಹೇರುತ್ತಿದ್ದಾರೆ ಎಂದರು.

ರಾಜ್ಯದ 15 ಪ್ರಮುಖ ನದಿಗಳಿಂದ ನೀರು ಸಂಗ್ರಹ ಕಾರ್ಯಕ್ರಮ ಜನತಾ ಜಲಧಾರೆಗೆ ನಾಳೆ ರಾಮನಗರದಲ್ಲಿ ಚಾಲನೆ ಸಿಗಲಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು