Bengaluru 23°C
Ad

ಬೆಂಗಳೂರಿಗೆ ʼರಾಗಾʼ ಆಗಮನ; ಕೆಲವೇ ನಿಮಿಷಗಳಲ್ಲಿ ಕೋರ್ಟ್ ಮುಂದೆ ಹಾಜರು

Raga

ಬೆಂಗಳೂರು: ಕರ್ನಾಟಕ ಬಿಜೆಪಿ ಸಲ್ಲಿಕೆ ಮಾಡಿ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ರಾಹುಲ್ ಗಾಂಧಿಯವರನ್ನು ಸಿಎಂ ಡಿ.ಸಿಎಂ ಅವರು ಸ್ವಾಗತಿಸಿದರು. ಇನ್ನೂ ಇದೇ ವೇಳೇ ಅವರು ಕೋರ್ಟ್‌ ನತ್ತ ತೆರಳುತ್ತಿದ್ದಾರೆ. ಜೂನ್ 1 ರಂದು ನಡೆದ ವಿಚಾರಣೆಗೆ ರಾಹುಲ್ ಗಾಂಧಿ ಹಾಜರಾಗಿರಲಿಲ್ಲ.

ಆ ದಿನ ವಿಚಾರಣೆಗೆ ಹಾಜರಾಗದೇ ಇರುವುದಕ್ಕೆ ವಿನಾಯಿತಿ ನೀಡಿದ್ದ ನ್ಯಾಯಾಲಯ, ಜೂನ್ 7 ರಂದು ಹಾಜರಾಗಬೇಕು ಎಂದು ಸೂಚನೆ ನೀಡಿತ್ತು ಈ ಹಿನ್ನಲೆಯಲ್ಲಿ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದು, ಅವರು ನ್ಯಾಯಾಲಯದಿಂದ ಇಂದು ಜಾಮೀನು ಕೋರಲಿದ್ದಾರೆ ಎನ್ನಲಾಗಿದೆ.

Ad
Ad
Nk Channel Final 21 09 2023
Ad