Bengaluru 28°C
Ad

ಅಕ್ಟೋಬರ್ 3ಕ್ಕೆ ಪಿಎಸ್‌ಐ ಪರೀಕ್ಷೆಗೆ ಮರು ದಿನಾಂಕ ನಿಗದಿ- ಕೆಇಎ

ಯುಪಿಎಸ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಒತ್ತಾಯದಿಂದ ಎರಡು ಬಾರಿ ಮುಂದೂಡಿಕೆ ಆಗಿದ್ದ 402 ಪಿಎಸ್‌ಐ (PSI) ಹುದ್ದೆಗಳ ಪರೀಕ್ಷೆಗೆ ಹೊಸ ದಿನಾಂಕ ನಿಗದಿಯಾಗಿದೆ. ಅ.3 ರಂದು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ದಿನಾಂಕ ನಿಗದಿ ಮಾಡಿದೆ. ಬೆಳಗ್ಗೆ 10:30 ರಿಂದ 12:00 ರ ವೆರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 12:30 ರಿಂದ 02:00 ರವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ.

ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಒತ್ತಾಯದಿಂದ ಎರಡು ಬಾರಿ ಮುಂದೂಡಿಕೆ ಆಗಿದ್ದ 402 ಪಿಎಸ್‌ಐ (PSI) ಹುದ್ದೆಗಳ ಪರೀಕ್ಷೆಗೆ ಹೊಸ ದಿನಾಂಕ ನಿಗದಿಯಾಗಿದೆ. ಅ.3 ರಂದು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ದಿನಾಂಕ ನಿಗದಿ ಮಾಡಿದೆ. ಬೆಳಗ್ಗೆ 10:30 ರಿಂದ 12:00 ರ ವೆರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 12:30 ರಿಂದ 02:00 ರವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ.

ಪಿಎಸ್‌ಐ ಪರೀಕ್ಷೆ ಜೊತೆಗೆ ವಿವಿಧ ಇಲಾಖೆಗಳ ಪರೀಕ್ಷೆಗಳಿಗೂ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ಪ್ರಕಟ ಮಾಡಿದೆ. ಗ್ರಾಮ ಆಡಳಿತಾಧಿಕಾರಿಗಳು ಮತ್ತು ಜಿಟಿಟಿಸಿಯ ವಿವಿಧ ಹುದ್ದೆಗಳಿಗೆ ಸೆ.29 ಮತ್ತು ಅ.26 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅ.7ರಂದು ಪರೀಕ್ಷೆ ನಡೆಯಲಿದೆ.

ಕೆ-ಸೆಟ್ (K-Set) ಪರೀಕ್ಷೆ ಸೇರಿದಂತೆ ರಾಯಚೂರು ವಿವಿ  ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನ.24 ರಂದು ಪರೀಕ್ಷೆಗಳು ನಡೆಯಲಿವೆ ಎಂದು ಕೆಇಎ ಮಾಹಿತಿ ನೀಡಿದೆ.

Ad
Ad
Nk Channel Final 21 09 2023