ಬೆಂಗಳೂರು: ಬಿಜೆಪಿಯ ಪ್ರಭಾವಿ ಶಾಸಕ ಮುನಿರತ್ನ ಜಾತಿನಿಂದನೆ, ಜೀವಬೆದರಿಕೆ ಆರೋಪದಲ್ಲಿ ವೈಯಾಲಿಕಾವಲ್ ಠಾಣೆ ಪೊಲೀಸರಿಂದ ಮುನಿರತ್ನ ಬಂಧನ ಆಗಿದ್ದು, ಮೆಡಿಕಲ್ ಚೆಕಪ್ ಮುಗಿಸಿ ಅಶೋಕ್ ನಗರ ಠಾಣೆಯಲ್ಲಿ ಇರಿಸಲಾಗಿದೆ. ಪೊಲೀಸರು ಇಂದು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜುಗೆ ಕೊಲೆ ಬೆದರಿಕೆ, ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು ಲಂಚಕ್ಕೆ ಬೇಡಿಕೆ, ಜಾತಿ ನಿಂದನೆ ಆರೋಪದಡಿ ಮುನಿರತ್ನ ಬಂಧನ ಆಗಿದೆ. ಕೋಲಾರ ಮಾರ್ಗವಾಗಿ ಆಂಧ್ರಕ್ಕೆ ತೆರಳುತ್ತಿದ್ದ ವೇಳೆ ಮುಳಬಾಗಿಲು ಬಳಿ ಬಂಧಿಸಿ ಅಶೋಕ ನಗರ ಠಾಣೆಗೆ ಕರೆತಲಾಗಿದೆ.
ನಿನ್ನೆ ಸಂಜೆ ಶಾಸಕ ಮುನಿರತ್ನ ಬಂಧಿಸಿ ಬೆಂಗಳೂರಿಗೆ ಕರೆತಂದ ವೈಯಾಲಿಕಾವಲ್ ಠಾಣೆ ಪೊಲೀಸರು ಎರಡು ಎಫ್ಐಆರ್ ದಾಖಲಿಸಿದ್ದಾರೆ. ಮೊದಲಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮುಗಿಸಿ ಬಳಿಕ ಅವರನ್ನ ಮೆಯೋ ಹಾಲ್ ಬಳಿಯ ಅಶೋಕ ನಗರ ಠಾಣೆಯಲ್ಲಿ ಇರಿಸಿದ್ದಾರೆ. ಪೊಲೀಸರು ಇಂದು ಶಾಸಕ ಮುನಿರತ್ನರನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಇನ್ನು ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಗುತ್ತಿಗೆದಾರ ವೇಲುನಾಯ್ಕ್ ದೂರು ದಾಖಲಿಸಿದ್ದು ಎರಡು ಎಫ್ಐಆರ್ ದಾಖಲಾಗಿವೆ. ಇದಕ್ಕೆ ವಿರುದ್ಧವಾಗಿ ಮುನಿರತ್ನ ಪರ ವಕೀಲ ಸದಾನಂದಶಾಸ್ತ್ರಿ ವೈಯಾಲಿಕಾವಲ್ ಠಾಣೆಯಲ್ಲಿ ಕೌಂಟರ್ ಕಂಪ್ಲೇಂಟ್ ಕೊಟ್ಟಿದ್ದಾರೆ.