ಬೆಂಗಳೂರು: ವಾಹನಗಳಿಗೆ ಸೆಪ್ಟೆಂಬರ್ 15ರೊಳಗೆ ಹೆಚ್ಎಸ್ಆರ್ಪಿ ನಂಬರ್ ಅಳವಡಿಸಿಕೊಂಡಿಲ್ಲ ಅಂದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ವಾಹನಗಳಿಗೆ ಹೆಚ್ಎಸ್ಆರ್ಪಿ ಅಳವಡಿಕೆಗೆ ಸೆಪ್ಟೆಂಬರ್ 15 ಡೆಡ್ಲೈನ್ ಆಗಿದೆ. ಸೆಪ್ಟೆಂಬರ್ 15ರ ನಂತರ ನಿಮ್ಮ ವಾಹನಕ್ಕೆ ಹೆಚ್ಎಸ್ಆರ್ಪಿ ಇಲ್ಲದ್ರೆ ದಂಡ ಹಾಕಲಾಗುತ್ತದೆ. ವಾಹನಗಳಿಗೆ ಹೈಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ ಆಳವಡಿಕೆಗೆ 5 ದಿನವಷ್ಟೇ ಬಾಕಿ ಇದೆ.
2019 ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಕ್ಕೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ ಆಗಿದೆ. ನಾಲ್ಕು ಬಾರಿ ಗಡುವು ನೀಡಿದ್ರೂ ಹೆಚ್ಎಸ್ಆರ್ಪಿ ಆಳವಡಿಸದ ವಾಹನ ಸವಾರರಿಗೆ ದಂಡದ ಬರೆ ಸಿಗಲಿದೆ.
ಇಲ್ಲಿಯವರಿಗೆ ಕೇವಲ 50 ಲಕ್ಷ ವಾಹನ ಸವಾರರು ಮಾತ್ರ ಹೆಚ್ಎಸ್ಆರ್ಪಿ ಆಳವಡಿಕೆ ಮಾಡಿಕೊಂಡಿದ್ದಾರೆ. ಇನ್ನೂ 1.4 ಕೋಟಿ ವಾಹನ ಸವಾರರು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕಿದೆ. ಈಗಾಗಲೇ ಮತ್ತೆ HSRP ಅಳವಡಿಕೆಗೆ ಗಡುವು ವಿಸ್ತರಣೆ ಮಾಡೋದಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ. ಮೊದಲ ಬಾರಿಗೆ 500 ರೂಪಾಯಿ ದಂಡ, ಎರಡನೇ ಬಾರಿ ಸಿಕ್ಕಿಬಿದ್ರೆ 1000 ದಂಡ ಹಾಕಲು ಸಾರಿಗೆ ಇಲಾಖೆ ಯೋಜನೆ ಹಾಕಿದೆ.