ಬೆಂಗಳೂರು: ರೇಣುಕಾಸ್ವಾಮಿ ಕೇಸ್ ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್ಗೆ ರೇಣುಕಾಸ್ವಾಮಿ ಕೇಸ್ ಸಂಬಂಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. ಕೋರ್ಟ್ಗೆ ಸಲ್ಲಿಸಲಾದ ಈ ಚಾರ್ಜ್ಶೀಟ್ನಲ್ಲಿ ಆಘಾತಕಾರಿ ವಿಷಯಗಳು ಬಹಿರಂಗವಾಗಿವೆ.
ನಟಿ ಪವಿತ್ರಾಗೌಡ ಅವರನ್ನು ಮೆಚ್ಚಿಸಲು ನಟ ದರ್ಶನ್ ರೇಣುಕಾಸ್ವಾಮಿ ಜೀವ ತೆಗೆದರು ಎನ್ನುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ನಟ ದರ್ಶನ್ಗೆ ಪವಿತ್ರಾಗೌಡ ಬ್ಲಾಕ್ಮೇಲ್ ಮಾಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ.
ನನ್ನ ಆಪ್ತ ವಲಯದಿಂದಲೇ ದರ್ಶನ್ ಹಾಗೂ ಪವಿತ್ರಾ ಸಂಬಂಧದ ಬಗ್ಗೆ ಗೊತ್ತಾಗಿತ್ತು. ನಾನು ಆ ವಿಚಾರದ ಬಗ್ಗೆ ಮಾತಾಡಿದಾಗ ದರ್ಶನ್, ನನ್ನ ನಡುವೆ ಜಗಳ ಆಗಿತ್ತು. ದರ್ಶನ್ ಕೂಡ ನನ್ನ ದುಡ್ಡು ನನ್ನಿಷ್ಟ ಎಂದಿದ್ದರು. ಈ ವಿಷಯಕ್ಕೆ ನಮ್ಮಿಬ್ಬರ ನಡುವೆ ಆಗಾಗ ಜಗಳ ಆಗುತ್ತಲೇ ಇತ್ತು. ಪವಿತ್ರಾಗೌಡ ಬಳಿ ದರ್ಶನ್ ಖಾಸಗಿ ವಿಡಿಯೋ, ಫೋಟೋಗಳಿರೋ ಹಾರ್ಡ್ ಡಿಸ್ಕ್ ಇತ್ತು. ಹಾರ್ಡ್ ಡಿಸ್ಕ್ ತನ್ನ ತಾಯಿ ಮನೆಯಲ್ಲಿ ಇಟ್ಟು ದರ್ಶನ್ಗೆ ಬ್ಲಾಕ್ಮೇಲ್ ಮಾಡುತ್ತಿದ್ದಳು ಎಂದು ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದು, ಇದು ಚಾರ್ಜ್ಶೀಟ್ನಲ್ಲಿ ದಾಖಲಾಗಿದೆ.