Bengaluru 22°C
Ad

ಪಾರ್ವತಿ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್​!

ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣ ಮುಳ್ಳಗಿದ್ದು, ಇದೀಗ ಸಿಎಂ ಪತ್ನಿ ಸೈಟ್​ ಹಿಂದಿರುಗಿಸಿರುವ ಬಗ್ಗೆ ಪತ್ರ ಬರೆದಿದ್ದು, ಸಿಎಂ ಸ್ಥಾನಕ್ಕೇ ಆಪತ್ತು ತಂದಿದೆ.

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣ ಮುಳ್ಳಗಿದ್ದು, ಇದೀಗ ಸಿಎಂ ಪತ್ನಿ ಸೈಟ್​ ಹಿಂದಿರುಗಿಸಿರುವ ಬಗ್ಗೆ ಪತ್ರ ಬರೆದಿದ್ದು, ಸಿಎಂ ಸ್ಥಾನಕ್ಕೇ ಆಪತ್ತು ತಂದಿದೆ. ನಾನು ತಪ್ಪು ಮಾಡಿಲ್ಲ, ಜಗ್ಗೋದಿಲ್ಲ, ಬಗ್ಗೋದಿಲ್ಲ, ಹೆದರುವುದಿಲ್ಲ ಎಂದು ಹೇಳ್ತಿದ್ದ ಸಿಎಂ, ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ.

ತಪ್ಪು ಮಾಡೇ ಇಲ್ಲ ಎಂದ ಮೇಲೆ ಸೈಟ್​ ವಾಪಸ್​ ಮಾಡ್ತಿರೋದೇಕೆ. ದಿಢೀರ್ ನಿವೇಶನಗಳನ್ನು ಹಿಂದಿರುಗಿಸಲು ಕಾರಣವಾದ್ರೂ ಏನು ಎಂಬ ಪ್ರಶ್ನೆ ಮೂಡಿದೆ. ಮೈಸೂರು ಲೋಕಾಯುಕ್ತ ತನಿಖೆಯ ನಡುವೆ, ಜಾರಿ ನಿರ್ದೇಶನಾಲಯ ಇಸಿಆರ್​ ದಾಖಲಿಸಿಕೊಂಡಿರುವುದು ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ಸೈಟ್​ ವಾಪಸ್​ ಕೊಡ್ಸಿದ್ರೆ ಮುಡಾ ಕೇಸ್‌ನಲ್ಲಿ ಕಾನೂನು ಕುಣಿಕೆಯಿಂದ ಪಾರಾಗುವುದು. ಸುಪ್ರೀಂಕೋರ್ಟ್‌ಗೆ ಹೋದಾಗ ನಿವೇಶನ ವಾಪಸ್ ಕೊಟ್ಟಿದ್ದೇವೆ ಎಂದು ವಾದಿಸಲು ಸಾಧ್ಯವಾಗಲಿದೆ.

ಸೈಟ್​ ವಾಪಸ್​ ನೀಡ್ತಿರುವ ಬಗ್ಗೆ ಪತ್ರ ರಿಲೀವ್​ ಆಗ್ತಿದ್ದಂತೆ, ಅತ್ತ ಸಿಎಂ ಸಿದ್ದರಾಮಯ್ಯ ತಡರಾತ್ರಿಯೇ ಮುಂದಾನ ಕಾನೂನು ಹೋರಾಟದ ಬಗ್ಗೆ ಕೆಲವರ ಬಳಿ ಸಹಾಯ ಪಡೆದಿದ್ದಾರೆ ಎನ್ನಲಾಗಿದೆ. ತಡರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಬೈರತಿ ಸುರೇಶ್, ಎ.ಎಸ್‌. ಪೊನ್ನಣ್ಣ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾ ಕೇಸ್​ ಹಿಂಪಡೆದಿರುವುದು ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಸೈಟ್​ ವಾಪಸ್​ ನೀಡುವ ಮೂಲಕ ಜನತಾ ನ್ಯಾಯಾಲಯದ ಮುಂದೆ ಸಿದ್ದರಾಮಯ್ಯ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

 

 

 

 

 

Ad
Ad
Nk Channel Final 21 09 2023