Bengaluru 27°C
Ad

ಕನ್ನಡಿಗರನ್ನು ಕೆಣಕಿದ ನಾರ್ತ್‌ ರಾಣಿ; ಇಲ್ಲಿಂದ ತೊಲಗಿ ಎಂದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌

Narth

ಬೆಂಗಳೂರು: ಇಲ್ಲೊಬ್ಬ ಯುವತಿ ಇನ್‌ಸ್ಟಾದಲ್ಲಿ ‘ನಾವೆಲ್ಲಾ ನಾರ್ತಿಸ್ ಬೆಂಗಳೂರು ಬಿಟ್ಟು ಹೋದ್ರೆ ಇಡೀ ಬೆಂಗಳೂರು ಪಟ್ಟಣ ಖಾಲಿ ಆಗೋಗುತ್ತೆ. ಮೊದಲಿಗೆ ಬೆಂಗಳೂರಿನ ಪಿಜಿಗಳು ಖಾಲಿ ಆಗುತ್ತೆ.

ಕೋರಮಂಗಲದ ಕ್ಲಬ್ ಗಳಲ್ಲಿ ಜನವೇ ಇಲ್ಲದೇ ಬಿಕೋ ಅನ್ನುತ್ತೆ. ಚಂದ ಚಂದನೆಯ ಹುಡುಗಿಯುರು ಪಂಜಾಬಿ ಮ್ಯೂಸಿಕ್‌ಗೆ ಡಾನ್ಸ್‌ ಮಾಡ್ತಾ ಇರ್ತಾರಲ್ಲ, ಅಂಥವರು ಯಾರೂ ನಿಮಗೆ ನೋಡೋಕೆ ಸಿಗೋದಿಲ್ಲ. ಸ್ವಲ್ಪ ಬುದ್ದಿವಂತಿಕೆಯಿಂದ ಮಾತನಾಡಿ’ ಎಂದು ರೀಲ್ಸ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕನ್ನಡಿಗರು ಸರಿಯಾಗಿ ಯುವತಿಯನ್ನು ಜಾಡಿಸಿದ್ದಾರೆ.

‘ತೊಲಗ್ರೋ ಮೊದಲು’ ಎನ್ನುವ ಹ್ಯಾಷ್‌ಟ್ಯಾಗ್‌ ಮೂಲಕ ಅಭಿಯಾನ ಕೂಡ ಶುರು ಮಾಡಿದ್ದಾರೆ. ಸಾಮಾನ್ಯರಿಂದ ಸೆಲೆಬ್ರಿಟಿವರೆಗೂ ಕಮಂಟ್ ಮಾಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ನಿರೂಪಕಿ/ನಟಿ ಅನುಪಮ ಗೌಡ ಕೂಡ ಗರಂ ಆಗಿದ್ದು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ. ಬೆಂಗಳೂರಿನ ಬಗ್ಗೆ ಕಡೆಗಣನೆ ಮಾಡೋರು ಮೊದಲು ಇಲ್ಲಂದ ತೊಲಗಿ ಎಂದು ಗರಂ ಆಗಿಯೇ ಕಮೆಂಟ್‌ ಮಾಡಿದ್ದಾರೆ. ಚಂದನ್ ಶೆಟ್ಟಿ , ನಟಿ ಚೈತ್ರಾ ಆಚಾರ್, ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ, ಧನರಾಜ್ ಹೀಗೆ ಹಲವರು ಕಮೆಂಟ್‌ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಪಬ್ಲಿಸಿಟಿ ಸ್ಟಂಟ್ಸ್ ಇರಬಹುದು! ಯುವತಿ ಈ ರೀತಿ ಪೋಸ್ಟ್‌ ಮಾಡಿರುವುದು ನೋಡಿ ಪಬ್ಲಿಸಿಟಿ ಸ್ಟಂಟ್ಸ್ ಗೋ, ಅಥವಾ ಉದ್ಧಟತನಕ್ಕೋ ಎಂದು ತಿಳಿಯುತ್ತಿಲ್ಲ ಎಂದು ಹಲವರು ಕಮೆಂಟ್‌ ಮಾಡುತ್ತಿದ್ದಾರೆ. ಸಿಲಿಕಾನ್ ಸಿಟಿ ಬಗ್ಗೆ ತುಚ್ಚವಾಗಿ ಮಾತನಾಡಿದ ಈ ಯುವತಿಯನ್ನು ಬಿಡಬೇಡಿ ಎಂದು ಮಹಿಳೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸುಗಂಧಶರ್ಮ ಎನ್ನುವ ಹೆಸರಿನಲ್ಲಿ ಈ ಯುವತಿ ವಿಡಿಯೋ ಪೊಸ್ಟ್‌ ಮಾಡಿದ್ದಾಳೆ.

Ad
Ad
Nk Channel Final 21 09 2023