ಬೆಂಗಳೂರು: ಮಹಿಳೆಯರ ಸೌಂದರ್ಯ ರಕ್ಷಣೆ, ಆರೋಗ್ಯ ಮತ್ತು ಯೋಗ ಕ್ಷೇಮಕ್ಕಾಗಿ ಜಾಗತಿಕ ಮಟ್ಟದ ಓರೇನ್ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬ್ಯೂಟಿ ಅಂಡ್ ವೆಲ್ನೆಸ್ ನಿಂದ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಅತ್ಯಾಧುನಿಕ ಕೇಂದ್ರ ಪ್ರಾರಂಭವಾಗಿದೆ. ಆಕರ್ಷಕ ಬ್ಯೂಟಿಷಿಯನ್ ಕೋರ್ಸ್ ಗಳ ಮೂಲಕ ಕನ್ನಡನಾಡಿನ ಸೌಂದರ್ಯಕ್ಕೆ ಮೆರವು ನೀಡಲು ಸಂಸ್ಥೆ ಸಜ್ಜಾಗಿದೆ.
ಈ ಕೇಂದ್ರಕ್ಕೆ ಮಿಸ್ ಯೂನಿವರ್ಸ್ ಕರ್ನಾಟಕ ಅವನಿ ಕಾಕೆ ಕೊಚ್ಚಿ ಭಟ್ ಚಾಲನೆ ನೀಡಿದರು. ಇದು ರಾಜ್ಯದ 120 ನೇ ಮತ್ತು ಬೆಂಗಳೂರಿನಲ್ಲಿ 3ನೇ ಕೇಂದ್ರವಾಗಿದೆ.
ಓರೇನ್ ದೇಶದ 19 ಕ್ಕೂ ಹೆಚ್ಚಿನ ರಾಜ್ಯಗಳಲ್ಲಿದ್ದು, ಕೂದಲು, ಉಗುರು, ಮೇಕಪ್ ಮತ್ತು ಪೋಷಣೆಗೆ ಸಂಸ್ಥೆ ಹೆಸರುವಾಸಿಯಾಗಿದೆ ಮತ್ತು ಪ್ರಮಾಣೀಕರಿಸಲ್ಪಟ್ಟಿದೆ. ಸ್ಕಿಲ್ ಇಂಡಿಯಾ ಉಪಕ್ರಮದಲ್ಲೂ ಸಹ ಇದು ಒಳಗೊಂಡಿದ್ದು, ಕೌಶಲ್ಯ ತರಬೇತಿಯಲ್ಲಿ ಓರೇನ್ ಜಾಗತಿಕ ಮಟ್ಟದ ಶ್ರೇಷ್ಠ ಬ್ರ‍್ಯಾಂಡ್ ಆಗಿ ಹೊರ ಹೊಮ್ಮಿದೆ. ಸೌಂದರ್ಯ ಉದ್ದೇಶಕ್ಕಾಗಿಯೇ ಕೆನಡಾದಲ್ಲಿ ಎರಡು ಪ್ರತ್ಯೇಕ ಕಾಲೇಜುಗಳನ್ನು ತೆರೆಯಲಾಗಿದ್ದು, ಇದೀಗ ರಾಜ್ಯದಲ್ಲೂ ಡಿಪ್ಲೋಮಾಗಳು, ಪಿಜಿ ಡಿಪ್ಲೋಮಾಗಳಿಂದ ಸ್ನಾತಕೋತ್ತರವರೆಗೆ ತರಗತಿಗಳು ಪ್ರಾರಂಭಿಸಲಿದೆ.
ಮಿಸ್ ಯೂನಿವರ್ಸ್ ಕರ್ನಾಟಕ ಅವನಿ ಕಾಕೆ ಕೊಚ್ಚಿ ಭಟ್ ಮಾತನಾಡಿ, ಭಾರತದ ಪ್ರಾಚೀನ ಪರಂಪರೆಯಲ್ಲಿ 64 ಶಾಸ್ತ್ರಗಳಿದ್ದು, ಅದರಲ್ಲಿ ಮೇಕಪ್, ಕೇಶಾಲಂಕಾರವೂ ಕೂಡ ಒಂದು ಭಾಗವಾಗಿದೆ, ಹೀಗಾಗಿ ಸೌಂದರ್ಯ ವರ್ಧನೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದರು.
ಈ ಕೇಂದ್ರದ ಮುಖ್ಯಸ್ಥ ಪ್ರಾಂಜಲ್ ಕುಮಾರ್ ಮಾತನಾಡಿ ಸಂಸ್ಥೆಯಿಂದ ಮಹಿಳೆಯರಿಗೆ ಉದ್ಯೋಗದ ಜೊತೆಗೆ ಸೌಂದರ್ಯ ವರ್ಧನೆಯಲ್ಲಿ ಅತ್ಯುತ್ತಮ ಕಲಿಕೆಗೆ ಇದು ವೇದಿಕೆಯಾಗಲಿದೆ ಎಂದರು.
ನಿರ್ದೇಶಕ ಸಂಜೀವ್ ಕುಮಾರ್ ಸಿನ್ಹಾ ಮಾತನಾಡಿ, ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತವಾಗಬಾರದು. ಆದಾಯ ಗಳಿಕೆಯಲ್ಲೂ ಮುಂಚೂಣಿಗೆ ಬರುವಂತೆ ಸೂಕ್ತ ವಾತಾವರಣ ನಿರ್ಮಿಸುತ್ತೇವೆ ಎಂದರು. ಸಂಸ್ಥೆಯ ನಿರ್ದೇಶಕರಾದ ಅಮಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.