ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಘಟನೆ ನಡೆದು ಮೂರು ತಿಂಗಳು ಕಳೆದಿದ್ದು ನಿತ್ಯ ಸಾಕಷ್ಟು ಮಾಹಿತಿಗಳು ಹೊರ ಭೀಳುತ್ತಿದೆ. ಮೃತ ರೇಣುಕಾಸ್ವಾಮಿ ನಟಿ ಪವಿತ್ರಾ ಗೌಡಗೆ ಮಾತ್ರವಲ್ಲ ರಾಗಿಣಿಗೂ ಮೆಸೇಜ್ ಮಾಡಿದ್ದ ಎನ್ನಲಾಗುತ್ತಿದೆ.
ಈ ಬಗ್ಗೆ ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಾಗಿಣಿ ದ್ವಿವೇದಿ ಅವರಿಗೂ ರೇಣುಕಾಸ್ವಾಮಿ ಮೆಸೇಜ್ ಕಳುಹಿಸಿದ್ದ ಎಂಬ ವಿಚಾರ ಜಾರ್ಜ್‌ಶೀಟ್ ಉಲ್ಲೇಖವಾಗಿತ್ತು. ಇದಕ್ಕೆ ರಾಗಿಣಿ ಪ್ರತಿಕ್ರಿಯಿಸಿ, ಅಶ್ಲೀಲ ಸಂದೇಶಗಳು ನನಗೆ ಬಂದಿರುವ ಮಾಹಿತಿ ಇಲ್ಲ ಎಂದಿದ್ದಾರೆ.
ನನ್ನ ಪ್ರೊಫೈಲ್ ಅನ್ನು ಏಜೆನ್ಸಿ ಹ್ಯಾಂಡಲ್ ಮಾಡುತ್ತದೆ. ಹೀಗಾಗಿ ಅಶ್ಲೀಲ ಸಂದೇಶಗಳು ನನಗೆ ಬಂದಿರುವ ಮಾಹಿತಿ ಇಲ್ಲ. ಬಂದಿದ್ದರೂ ನಾನು ಅದನ್ನ ಓದುವುದಿಲ್ಲ ಎಂದಿದ್ದಾರೆ. ನನ್ನ ಗಮನಕ್ಕೆ ಬಂದಂತೆ ಯಾವುದೇ ಕೆಟ್ಟ ಸಂದೇಶ ಬಂದಿಲ್ಲ ಎಂದು ರಾಗಿಣಿ ಸ್ಪಷ್ಟನೆ ನೀಡಿದ್ದಾರೆ.
ನಕಲಿ ಅಕೌಂಟ್ ಹೊಂದಿದ್ದ ರೇಣುಕಾಸ್ವಾಮಿ ಅದರಿಂದ ಖ್ಯಾತ ನಟಿಯರಿಗೆ ಮೆಸೇಜ್ ಮಾಡುತ್ತಿದ್ದ ಎನ್ನಲಾಗುತ್ತಿದೆ. ಪ್ರದೋಶ್ ಮತ್ತು ವಿನಯ್ ನೀಡಿರುವ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಈ ನಟಿಯರಿಗೆ ಮಾತ್ರವಲ್ಲ, ಇನ್ನೂ ಹಲವು ನಟಿಯರಿಗೆ ಮೆಸೇಜ್ ಕಳುಹಿಸಿದ್ದ ಎಂದಿದ್ದಾರೆ.