Ad

ವಾಲ್ಮಿಕಿ ನಿಗಮ ಹಗರಣ : ತಡರಾತ್ರಿವರೆಗೆ ನಾಗೇಂದ್ರ ಮನೆಯಲ್ಲಿ ಜಾಲಾಡಿದ ಇಡಿ

ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರಬಂಧನ ಸನ್ನಿಹಿತವಾಗಿದೆ. ನಿನ್ನೆ ನಾಗೇಂದ್ರ ಬೆಂಗಳೂರು , ಬಳ್ಳಾರಿ ನಿವಾಸ, ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಾಲಾಡಿದ್ದಾರೆ. ಸುಮಾರು 16 ಗಂಟೆ ನಾಗೇಂದ್ರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ.

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರಬಂಧನ ಸನ್ನಿಹಿತವಾಗಿದೆ. ನಿನ್ನೆ ನಾಗೇಂದ್ರ ಬೆಂಗಳೂರು , ಬಳ್ಳಾರಿ ನಿವಾಸ, ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಾಲಾಡಿದ್ದಾರೆ. ಸುಮಾರು 16 ಗಂಟೆ ನಾಗೇಂದ್ರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ.

Ad
300x250 2

ತಡರಾತ್ರಿವರೆಗೆ ಪ್ರತೀ ದಾಖಲೆ ತೋರಿಸಿ ಇಡಿ ಪ್ರಶ್ನೆ ಮಾಡಿದೆ. ನಾಗೇಂದ್ರ ಪಿಎ ಹರೀಶನನ್ನು ಮನೆಗೆ ಕರೆತಂದು ವಿಚಾರಣೆ ಮಾಡಲಾಗಿದೆ. ಏನೇ ಕೇಳಿದ್ರೂ ಹರೀಶ್ ಮಾಜಿ ಸಚಿವ ನಾಗೇಂದ್ರ ಮುಖನೋಡ್ತಿದ್ದರಂತೆ, ಈ ಹಿನ್ನೆಲೆಯಲ್ಲಿ ಹರೀಶ್‌ನನ್ನ ವಶಕ್ಕೆ ಪಡೆದು ಶಾಂತಿನಗರ ಕಚೇರಿಯಲ್ಲಿ ವಿಚಾರಣೆ ಮಾಡಲಾಗಿತ್ತು. ಹೇಳಿಕೆ ದಾಖಲಿಸಿ ಹರೀಶ್‌ನನ್ನ ಬಿಟ್ಟುಕಳಿಸಲಾಗಿದೆ. ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

Ad
Ad
Nk Channel Final 21 09 2023
Ad