ಬೆಂಗಳೂರು : ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ನಾನು ಸತ್ತ ಬಳಿಕ ನನ್ನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಬಾರದು ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಬೆಂಗಳೂರಿನ ಪ್ರಶಾಂತ್ ಲೇಔಟ್ ನಲ್ಲಿರುವ ಪಿಜಿ ಯೊಂದರಲ್ಲಿ ನಡೆದಿದೆ.
ಗೌತಮಿ (25) ಮೃತ ದುರ್ದೈವಿ. ಆಂಧ್ರಪ್ರದೇಶದ ಕಡಪಾ ಮೂಲದ ಗೌತಮಿ ಐಟಿ ಕಂಪನಿಯೊಂದರಲ್ಲಿ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಕೆಲಸದಿಂದ ಮರಳಿದ ಬಳಿಕ ಪತ್ರ ಬರೆದಿಟ್ಟು ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad