ಬೆಂಗಳೂರು: ಜಾತಿ ನಿಂದನೆ, ಬೆದರಿಕೆ ಕೇಸ್‌ನಲ್ಲಿ ಶಾಸಕ ಮುನಿರತ್ನ ಜೈಲು ಸೇರಿದ್ದಾರೆ. ಮುನಿರತ್ನಗೆ ಬೇಲಾ? ಜೈಲೇ ಫಿಕ್ಸ್ ಆಗುತ್ತಾ ಅನ್ನೋದು ಇವತ್ತು ಡಿಸೈಡ್ ಆಗುತ್ತೆ. ನಿನ್ನೆ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ಕೋರ್ಟ್ ತೀರ್ಪನ್ನ ಇಂದಿಗೆ ಕಾಯ್ದಿರಿಸಿದೆ. ಇದರ ನಡುವೆ ಮುನಿರತ್ನ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ನಿನ್ನೆ ರಾಮನಗರದ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು. 2015ರಿಂದ 2024ರವರೆಗೂ ನಡೆದಿರುವ ಪ್ರಕರಣ ಅಂದಿದ್ದಾರೆ. FIRನಲ್ಲಿ ಜನಾಂಗೀಯ ಪ್ರಚೋದನೆ ಅಂತ ಉಲ್ಲೇಖಿಸಿದ್ದಾರೆ. ಚಲುವರಾಜು ಉಪಸ್ಥಿತಿಯಲ್ಲಿನಡೆದಿದೆ, ಅವರೇ ಪ್ರಚಾರ ಮಾಡಿದ್ದಾರೆ. ಚೆಲುವರಾಜು ಇದರ ನಿಜ ಆರೋಪಿ ಎಂದರು. ಮೇ 18ರಂದು ನಡೆದ ಘಟನೆ ಆಗಿದ್ದರೂ ಈಗ FIR ಆಗಿದೆ. ಮುನಿರತ್ನ ಕಚೇರಿಯಲ್ಲಿ ನಡೆದಿದೆ ಅಂತ ಆರೋಪಿಸಲಾಗಿದೆ. ದೂರುದಾರರ ಮುಂದೆ ಮುನಿರತ್ನ ಜಾತಿನಿಂದನೆ ಮಾಡಿಲ್ಲ ಎಂದು ವಾದಿಸಿದರು.
Ad