ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷ ಅವಧಿ ಪೂರ್ಣ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಈ ಬಾರಿ ನಾವು ಕೇಂದ್ರದಲ್ಲಿ 100 ಸ್ಥಾನ ತಲುಪಿದ್ದೇವೆ. ಇನ್ನೂ ಸ್ವಲ್ಪ ದಿನಗಳಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಮೋದಿ ಸರ್ಕಾರ 5 ವರ್ಷ ಪೂರೈಕೆ ಮಾಡೊಲ್ಲ. ಇವತ್ತಿನ ರಾಜಕೀಯ ಸನ್ನಿವೇಶದಿಂದ ಇದನ್ನ ಹೇಳುತ್ತಿದ್ದೇನೆ. ಮೋದಿ ಸರ್ಕಾರ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬೆಂಬಲದ ಮೇಲೆ ನಿಂತಿರೋದು. ಅವರು ಯಾವಾಗ ಬೇಕಾದರೂ ಬೆಂಬಲ ವಾಪಸ್ ಪಡೆಯಬಹುದು ಎಂದು ಹೇಳಿದ್ದಾರೆ.
ನಮಗೆ ಇರುವ ಮಾಹಿತಿ ಪ್ರಕಾರ, ಸದ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 5 ವರ್ಷ ಪೂರ್ಣ ಮಾಡಲ್ಲ. ನಮ್ಮ ಸರ್ಕಾರ ಬೀಳುತ್ತೆ ಎಂದು ಬಿಜೆಪಿ ಅವರು ಹೇಳ್ತಾರೆ. 136 ಸ್ಥಾನ ಇದ್ದರೂ ಬೀಳುತ್ತೆ ಅಂತಾ ಮಾತಾಡ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.